Select Your Language

Notifications

webdunia
webdunia
webdunia
webdunia

ಕಿರುತೆರೆಯ ಈ ಖ್ಯಾತ ನಟಿ ಸೌಂದರ್ಯ ಸಹೋದರ ಸಂಬಂಧಿ!

ಕಿರುತೆರೆಯ ಈ ಖ್ಯಾತ ನಟಿ ಸೌಂದರ್ಯ ಸಹೋದರ ಸಂಬಂಧಿ!
ಬೆಂಗಳೂರು , ಸೋಮವಾರ, 1 ಮೇ 2023 (06:50 IST)
ಬೆಂಗಳೂರು: ಕನ್ನಡ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಮಿಂಚಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದ ನಟಿ ಸೌಂದರ್ಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಆಕೆಯ ಸಹೋದರ ಸಂಬಂಧಿಯೊಬ್ಬರು ಇಂದು ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಅವರು ಯಾರು ಗೊತ್ತೇ?

ಸೌಂದರ್ಯ ಸಹೋದರ ಸಂಬಂಧಿ ಬೇರೆ ಯಾರೂ ಅಲ್ಲ. ಕಿರುತೆರೆ ನಟಿ ರಶ್ಮಿ ಪ್ರಭಾಕರ್. ಅಭಿಮಾನಿಗಳೊಂದಿಗಿನ ಪ್ರಶ್ನೋತ್ತರಾವಳಿಯಲ್ಲಿ ಒಮ್ಮೆ ಅವರೇ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

ನೀವು ನಟಿ ಸೌಂದರ್ಯ ಅವರ ಕಸಿನ್ ಅಂತ ಸುದ್ದಿಯಿದೆ. ಇದು ನಿಜವಾ ಎಂದು ಕೇಳಿದ್ದಾರೆ. ಇದಕ್ಕೆ ರಶ್ಮಿ ಪ್ರಭಾಕರ್ ಹೌದು ಎಂದು ಉತ್ತರಿಸಿದ್ದಾರೆ. ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮಾ, ಶುಭ ವಿವಾಹ, ಮನಸ್ಸೆಲ್ಲಾ ನೀನೆ ಮುಂತಾದ ಧಾರವಾಹಿಗಳಲ್ಲಿ ನಟಿಸಿ ಖ್ಯಾತರಾಗಿರುವ ರಶ್ಮಿ ಇತ್ತೀಚೆಗಷ್ಟೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕನ್ನಡ ಮಾತ್ರವಲ್ಲದೆ, ತೆಲುಗು ಧಾರವಾಹಿಗಳಲ್ಲೂ ನಟಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿನ ವದಂತಿಗಳಿಗೆ ಬ್ರೇಕ್ ಹಾಕಿದ ಹಿರಿಯ ನಟ ದ್ವಾರಕೀಶ್