Select Your Language

Notifications

webdunia
webdunia
webdunia
webdunia

ರಾಜಕೀಯಕ್ಕೆ ದಳಪತಿ ವಿಜಯ್ ಎಂಟ್ರಿ

Thalapathy Vijay

Krishnaveni K

ಚೆನ್ನೈ , ಬುಧವಾರ, 31 ಜನವರಿ 2024 (08:58 IST)
ಚೆನ್ನೈ: ತಮಿಳುನಾಡಿನ ಸಿನಿಮಾ ತಾರೆಯರಿಗೂ ರಾಜಕೀಯಕ್ಕೂ ಅವಿನಾಭಾವ ನಂಟಿದೆ. ಹಲವು ಸಿನಿ ತಾರೆಯರು ರಾಜಕೀಯದಲ್ಲೂ ಮಿಂಚಿದ ಉದಾಹರಣೆಯಿದೆ.

ಇದೀಗ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯ ಪಕ್ಷವೊಂದನ್ನು ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ತಮಿಳುನಾಡಿನಲ್ಲಿ 2026 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ವಿಜಯ್ ಹೊಸ ರಾಜಕೀಯ ಪಕ್ಷ ಸ್ಪರ್ಧೆಗಿಳಿಯಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದಕ್ಕಾಗಿ ಈಗಲೇ ತಯಾರಿ ಆರಂಭವಾಗಿದೆ.

ಇದೇ ಫೆಬ್ರವರಿ ಮೊದಲ ವಾರದಲ್ಲಿ ನವದೆಹಲಿಯಲ್ಲಿ ವಿಜಯ್ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಲಿದ್ದಾರಂತೆ. ಸದ್ಯದಲ್ಲಿಯೇ ಅವರು ತಮ್ಮ ರಾಜಕೀಯ ಪಕ್ಷದ ನೋಂದಣಿ ಮಾಡಿಸಿಕೊಳ್ಳಲಿದ್ದಾರೆ. ಆದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಅವರಿಗಿಲ್ಲ ಎನ್ನಲಾಗಿದೆ.

ವಿಜಯ್ ಹೊಸ ಪಕ್ಷಕ್ಕೆ ಅಭಿಮಾನಿ ಸಂಘವೇ ಅಡಿಪಾಯ
ದಳಪತಿ ವಿಜಯ್ ತಮ್ಮ ಹೊಸ ರಾಜಕೀಯ ಪಕ್ಷಕ್ಕೆ ಅಭಿಮಾನಿ ಸಂಘವನ್ನೇ ಬಳಸಿಕೊಳ್ಳಲಿದ್ದಾರೆ. ಈಗಾಗಲೇ ನೋಂದಣಿಯಾಗಿರುವ ವಿಜಯ್ ಅಭಿಮಾನಿ ಬಳಗ ಮಕ್ಕಳ್ ಇಯಕ್ಕಮ್ ಅನ್ನೇ ರಾಜಕೀಯ ಪಕ್ಷವಾಗಿ ಬದಲಾಯಿಸಿಕೊಳ್ಳಲಿದ್ದಾರಂತೆ. ಈ ಅಭಿಮಾನಿ ಬಳಗ ಈಗಾಗಲೇ ಹಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೆ, ಕೇರಳ, ಕರ್ನಾಟಕದಲ್ಲೂ ಇರುವ ಅಭಿಮಾನಿಗಳನ್ನು ಬಳಸಿಕೊಂಡು ಈ ರಾಜ್ಯಗಳಲ್ಲೂ ರಾಜಕೀಯ ಪಕ್ಷ ವಿಸ್ತರಿಸುವ ಇರಾದೆ ಅವರಿಗಿದೆ.

ದಳಪತಿ ವಿಜಯ್ ರಾಜಕೀಯ ಸೇರ್ಪಡೆ ಬಗ್ಗೆ ಹಲವು ಸಮಯದಿಂದ ವದಂತಿಗಳಿತ್ತು. ಲಿಯೋ ಸಿನಿಮಾ ಬಳಿಕ ಬ್ರೇಕ್ ತೆಗೆದುಕೊಂಡು ರಾಜಕೀಯದತ್ತ ಗಮನ ಹರಿಸಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಓಡಾಡುತ್ತಿತ್ತು. ಅದೀಗ ನಿಜವಾಗುವ ಲಕ್ಷಣವಿದೆ.

ಇದಕ್ಕೆ ಮೊದಲು ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪಕ್ಷ ಘೋಷಿಸಿ ಬಳಿಕ ಅದನ್ನು ನಿರ್ವಹಿಸಲು ಸಾಧ‍್ಯವಿಲ್ಲವೆಂದು ಹೊರಬಂದಿದ್ದರು. ಅದರೆ ಕಮಲ್ ಹಾಸನ್ ಈಗಲೂ ತಮ್ಮದೇ ರಾಜಕೀಯ ಪಕ್ಷ ಹೊಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ವೃತ್ತಿ ಜೀವನಕ್ಕೆ 28 ವರ್ಷ