Select Your Language

Notifications

webdunia
webdunia
webdunia
webdunia

ಕಂಗುವಾ ಶೂಟಿಂಗ್ ವೇಳೆ ಗಾಯ: ಅಪ್ ಡೇಟ್ ಕೊಟ್ಟ ನಟ ಸೂರ್ಯ

ಕಂಗುವಾ ಶೂಟಿಂಗ್ ವೇಳೆ ಗಾಯ: ಅಪ್ ಡೇಟ್ ಕೊಟ್ಟ ನಟ ಸೂರ್ಯ
ಚೆನ್ನೈ , ಶುಕ್ರವಾರ, 24 ನವೆಂಬರ್ 2023 (10:20 IST)
ಚೆನ್ನೈ: ಕಂಗುವಾ ಶೂಟಿಂಗ್ ವೇಳೆ ಗಾಯಗೊಂಡಿರುವ ನಟ ಸೂರ್ಯ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.

ಕಂಗುವಾ ಶೂಟಿಂಗ್ ವೇಳೆ ಕ್ಯಾಮರಾ ಭುಜಕ್ಕೆ ಬಿದ್ದು ಸೂರ್ಯ ಗಾಯಗೊಂಡಿದ್ದರು. ಹೀಗಾಗಿ ಶೂಟಿಂಗ್ ಸ್ಥಗಿತಗೊಳಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಗಾಯವಾದ ಮಾಹಿತಿ ತಿಳಿದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು.

ಇದೀಗ ತಮ್ಮ ಅಭಿಮಾನಿಗಳಿಗೆ ಖುದ್ದಾಗಿ ಸೂರ್ಯ ಸೋಷಿಯಲ್ ಮೀಡಿಯಾ ಮೂಲಕವೇ ಮಾಹಿತಿ ನೀಡಿದ್ದಾರೆ. ಶೂಟಿಂಗ್ ವೇಳೆ ಅವರಿಗೆ ಆದ ಗಾಯ ಗಂಭೀರವಲ್ಲ ಎಂದು ತಿಳಿದು ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿದ್ದಾರೆ.

‘ನನ್ನ ಸ್ನೇಹಿತರೇ, ಹಿತೈಷಿಗಳೇ, ಬೇಗ ಹುಷಾರಾಗಿ ಎಂಬ ನಿಮ್ಮೆಲ್ಲರ ಹಾರೈಕೆ, ಸಂದೇಶಗಳಿಗೆ ಹೃದಯ ತುಂಬಿ ಬಂದಿದೆ. ಈಗ ಚೇತರಿಸಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಯಾವತ್ತೂ ಚಿರ ಋಣಿ’ ಎಂದು ಬರೆದುಕೊಂಡಿದ್ದಾರೆ. ಸ್ವತಃ ಸೂರ್ಯ ಬರೆದಿರುವ ಸಂದೇಶ ಓದಿ ಅಭಿಮಾನಿಗಳಿಗೂ ನೆಮ್ಮದಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನದಾಳವನ್ನು ಬಿಚ್ಚಿಟ್ಟ ಹಾಟ್ ನಟಿ ನಯನತಾರಾ