ಮಂಡ್ಯದ ಹೊಲದಲ್ಲಿ ಅಂಬರೀಶ್ ಅಮರ! ಮೂಕವಾಯಿತು ಸುಮಲತಾ ಹೃದಯ!

ಶನಿವಾರ, 9 ಫೆಬ್ರವರಿ 2019 (09:06 IST)
ಬೆಂಗಳೂರು: ಅಂಬರೀಶ್ ಎಂದರೆ ಮಂಡ್ಯ, ಮಂಡ್ಯ ಎಂದರೆ ಅಂಬರೀಶ್ ಎನ್ನುವ ಮಟ್ಟಿಗೆ ಅಲ್ಲಿನ ಜನರಿಗೆ ರೆಬಲ್ ಸ್ಟಾರ್ ಮೇಲೆ ಪ್ರೀತಿಯಿದೆ. ಇದೀಗ ಅಂಬರೀಶ್ ಇಹಲೋಕ ತ್ಯಜಿಸಿದರೂ ಅವರ ಮೇಲಿನ ಪ್ರೀತಿ ಮಾತ್ರ ಇಲ್ಲಿನ ಜನರಿಗೆ ಕಡಿಮೆಯಾಗಿಲ್ಲ.


ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲಿನ ರೈತರೊಬ್ಬರು ತಮ್ಮ ಹೊಲದಲ್ಲಿ ‘ಮತ್ತೆ ಹುಟ್ಟಿ ಬಾ ಅಂಬರೀಶ್ ಅಣ್ಣ’ ಎಂದು ಬೆಳೆಯನ್ನೇ ಕತ್ತರಿಸಿಕೊಂಡು ಬರೆಯಿಸಿಕೊಂಡು ತಮ್ಮ ಅಭಿಮಾನ ಮೆರೆದಿದ್ದಾರೆ.

ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಅಂಬರೀಶ್ ಪತ್ನಿ ಸುಮಲತಾಗೂ ತಲುಪಿದ್ದು, ಅದನ್ನು ನೋಡಿ ಈ ಪ್ರೀತಿಗೆ ಏನು ಹೇಳಲಿ ಎಂದು ಕೈ ಮುಗಿದು ಧನ್ಯವಾದ ಸಲ್ಲಿಸಿದ್ದಾರೆ.

ಸುಮಲತಾ ಟ್ವೀಟ್ ಗೆ ಕಿಚ್ಚ ಸುದೀಪ್ ಕೂಡಾ ಪ್ರತಿಕ್ರಿಯಿಸಿದ್ದು, ಎಲ್ಲರ ಹೃದಯಲ್ಲಿ ನೆಲೆಸಿರುವ ವ್ಯಕ್ತಿಗೆ ಯಾವತ್ತೂ ಸಾವಿಲ್ಲ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING