Select Your Language

Notifications

webdunia
webdunia
webdunia
webdunia

ತಂದೆಯ ಗೆಲುವಿಗೆ ಪಣತೊಟ್ಟಿರುವ ಬಾಲಿವುಡ್ ನಟಿ ನೇಹಾ ಶರ್ಮಾರಿಂದ ಬಿರುಸಿನ ಪ್ರಚಾರ

Neha Sharma

Sampriya

ಪಟ್ನಾ , ಗುರುವಾರ, 25 ಏಪ್ರಿಲ್ 2024 (19:31 IST)
Photo Courtesy X
ಪಟ್ನಾ: ದೇಶದಲ್ಲಿ ಲೋಕಸಭೆ ಚುನಾವಣೆ ದಿನೇ ದಿನೆ ರಂಗೇರುತ್ತಿದೆ. ಹಿಂದಿನಿಂದಲೂ ಸಿನಿಮಾ ರಂಗಕ್ಕೂ, ರಾಜಕೀಯಗೂ ನಂಟಿದೆ.

ಇದೀಗ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಟಾರ್ ನಟ ನಟಿಯರು ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರವನ್ನು ಮಾಡುತ್ತಿದ್ದಾರೆ. ಇದೀಗ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುತ್ತಿರುವ ಬಾಲಿವುಡ್​ ನಟಿ ನೇಹಾ ಅವರು ರಾಜಕೀಯ ಪ್ರವೇಶ ಮಾಡುತ್ತಿದ್ದಾರೆಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ.

ನೇಹಾ ಶರ್ಮಾ ಅವರು ಕಾಂಗ್ರೆಸ್​ ಅಭ್ಯರ್ಥಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಬಾಲಿವುಡ್​ ನಟಿ ನೇಹಾ ಶರ್ಮಾ  ಅವರ ತಂದೆ ಅನಿಲ್​ ಶರ್ಮಾ ಬಿಹಾರದ ಭಗಲ್​ಪುರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತಂದೆ ಪರವಾಗಿ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡಿರುವ ನೇಹಾ ಅವರು ಈ ಮೂಲಕ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ.

ಇನ್ನು ನೇಹಾ ಶರ್ಮಾ ಅವರು ಭಗಲ್​ಪುರ ಮಾತ್ರವಲ್ಲದೇ ಬಂಕಾ, ಕಿಶನ್‌ಗಂಜ್, ಕತಿಹಾರ್ ಮತ್ತು ಪುರ್ನಿಯಾ ಕ್ಷೇತ್ರಗಳಲ್ಲಿನ ಮತ ಪ್ರಚಾರ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಬಿಗ್ ಸಿನಿಮಾದ ನ್ಯಾಶನಲ್ ಕ್ರಶ್, ಧನುಷ್ ಜತೆ ಶೂಟಿಂಗ್‌ನಲ್ಲಿ ಬ್ಯುಸಿಯಾದ ರಶ್ಮಿಕಾ