Select Your Language

Notifications

webdunia
webdunia
webdunia
webdunia

ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ ರಾಕಿಂಗ್ ಸ್ಟಾರ್ ಯಶ್ ಪೋಸ್ಟ್

Yash-Radhika

Krishnaveni K

ಬೆಂಗಳೂರು , ಸೋಮವಾರ, 6 ಮೇ 2024 (10:47 IST)
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಎಲ್ಲರ ಗಮನ ಸೆಳೆದಿದೆ. ಟಾಕ್ಸಿಕ್ ಮೂವಿ ಬಗ್ಗೆ ಅಪ್ ಡೇಟ್ ಸಿಗಬಹುದೇ ಎಂಬ ಕಾತುರ ಶುರುವಾಗಿದೆ.

ಇನ್ ಸ್ಟಾಗ್ರಾಂನಲ್ಲಿ ಯಶ್, ನಾನು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಪೋಸ್ಟ್ ಹಾಕಬೇಕೇ? ಎಂದು ಪ್ರಶ್ನಿಸಿ ಹೌದು ಅಥವಾ ಇಲ್ಲ ಎಂದು ಆಯ್ಕೆ ನೀಡಿದರು. ಶೇ.90 ಕ್ಕೂ ಹೆಚ್ಚು ಮಂದಿ ಹೌದು ಎಂದು ಉತ್ತರಿಸಿದ್ದರು. ಕೇವಲ 7 ಶೇಕಡಾ ಮಂದಿ ಮಾತ್ರ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು.

ಯಶ್ ಈಗ ಟಾಕ್ಸಿಕ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಬಗ್ಗೆ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದುವರೆಗೆ ಒಂದು ಫಸ್ಟ್ ಲುಕ್ ಟೀಸರ್ ಬಿಟ್ಟರೆ ಚಿತ್ರತಂಡದಿಂದ ಯಾವುದೇ ಅಪ್ ಡೇಟ್ ಸಿಕ್ಕಿಲ್ಲ. ಹೀಗಾಗಿ ಜನರು ಈ ಪೋಸ್ಟ್ ನೋಡಿದ ಮೇಲೆ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಪ್ ಡೇಟ್ ನೀಡಲು ಇಂತಹದ್ದೊಂದು ಪ್ರಶ್ನೆ ಹಾಕಿರಬಹುದೇ ಎಂದು ಅನುಮಾನಿಸಿದ್ದಾರೆ.

ಟಾಕ್ಸಿಕ್ ಸಿನಿಮಾವಲ್ಲದೇ ಯಶ್ ಈಗ ಬಾಲಿವುಡ್ ನ ರಾಮಾಯಣ ಸಿನಿಮಾಗೂ ಬಂಡವಾಳ ಹೂಡುತ್ತಿದ್ದಾರೆ. ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ಹಲವು ಗಾಸಿಪ್ ಗಳು ಕೇಳಿಬರುತ್ತಲೇ ಇರುತ್ತದೆ. ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಿಂದ ದೂರವೇ ಇರುವ ಯಶ್ ಈಗ ಇಂತಹದ್ದೊಂದು ಪ್ರಶ್ನೆ ಹಾಕಿದ್ದು ಯಾಕೆ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಷ್ಠಿತ ಸಂಸ್ಥೆಯ ಪಾಲಾಯ್ತು ರೂಪೇಶ್ ಶೆಟ್ಟಿಯ ʻಅಧಿಪತ್ರʼ ಸಿನಿಮಾದ ಆಡಿಯೊ ಹಕ್ಕು