Select Your Language

Notifications

webdunia
webdunia
webdunia
webdunia

ಪ್ರಶಾಂತ್ ನೀಲ್ ಮನೆಯಲ್ಲಿ ಜ್ಯೂ ಎನ್ ಟಿಆರ್ ಜೊತೆ ರಿಷಬ್ ಶೆಟ್ಟಿ

Rishab Shetty-Jr NTR-Prashanth Neel

Krishnaveni K

ಬೆಂಗಳೂರು , ಶನಿವಾರ, 2 ಮಾರ್ಚ್ 2024 (09:56 IST)
Photo Courtesy: Twitter
ಬೆಂಗಳೂರು: ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಮನೆಯಲ್ಲಿ ಜ್ಯೂ.ಎನ್ ಟಿಆರ್ ಜೊತೆ ರಿಷಬ್ ಶೆಟ್ಟಿ ದಂಪತಿ ಕಾಣಿಸಿಕೊಂಡಿದ್ದು, ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

webdunia
Photo Courtesy: Twitter
ಕೆಜಿಎಫ್, ಸಲಾರ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮನೆಯಲ್ಲಿ ನಿನ್ನೆ ಕಾರ್ಯಕ್ರಮವೊಂದು ಆಯೋಜನೆಯಾಗಿತ್ತು. ಈ ಕಾರಣಕ್ಕೆ ಸಿನಿಮಾ ರಂಗದ ತಮ್ಮ ಆಪ್ತರನ್ನು ಪ್ರಶಾಂತ್ ನೀಲ್ ಆಹ್ವಾನಿಸಿದ್ದರು ಎನ್ನಲಾಗಿದೆ. ಹೀಗಾಗಿ ಈ ಕಾರ್ಯಕ್ರಮದಲ್ಲಿ ಜ್ಯೂ.ಎನ್ ಟಿಆರ್ ದಂಪತಿ, ರಿಷಬ್ ಶೆಟ್ಟಿ ದಂಪತಿ, ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಕೂಡಾ ಭಾಗಿಯಾಗಿದ್ದಾರೆ.

webdunia
Photo Courtesy: Twitter
ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾವನ್ನು ಜ್ಯೂ.ಎನ್ ಟಿಆರ್ ಜೊತೆಗೆ ಮಾಡುತ್ತಿದ್ದಾರೆ. ಹೀಗಾಗಿ ಅವರ ನಡುವೆ ಆತ್ಮೀಯತೆಯಿದೆ. ಪ್ರಶಾಂತ್ ಮತ್ತು ರಿಷಬ್ ಶೆಟ್ಟಿ ಹೊಂಬಾಳೆ ಫಿಲಂಸ್ ಜೊತೆ ಕೆಲಸ ಮಾಡಿದವರು. ಪ್ರಶಾಂತ್ ನೀಲ್ ರನ್ನು ರಿಷಬ್ ಗೆ ಮೊದಲಿನಿಂದಲೂ ಪರಿಚಯವಿದೆ. ಇದೇ ಆತ್ಮೀಯತೆಯಿಂದ ರಿಷಬ್ ಶೆಟ್ಟಿ ದಂಪತಿಯನ್ನೂ ಆಹ್ವಾನಿಸಲಾಗಿದೆ. ಆದರೆ ಈ ಮೂವರೂ ಒಟ್ಟಿಗೇ ಇರುವುದನ್ನು ನೋಡಿ ಜ್ಯೂ.ಎನ್ ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಿನಿಮಾದಲ್ಲಿ ರಿಷಬ್ ಕೂಡಾ ಇರಲಿದ್ದಾರಾ ಎಂದು ಅಭಿಮಾನಿಗಳು ಶಂಕಿಸಿದ್ದಾರೆ.

ರಿಷಬ್, ಜ್ಯೂ.ಎನ್ ಟಿಆರ್ ದಂಪತಿ ಜೊತೆ ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ ಕಾಣಿಸಿಕೊಂಡಿದ್ದು ಇದು ಕೇವಲ ಕಾರ್ಯಕ್ರಮ ನಿಮಿತ್ತದ ಭೇಟಿಯಾ ಇಲ್ಲಾ ಸಿನಿಮಾ ವಿಚಾರ ಚರ್ಚೆ ನಡೆದಿರಬಹುದೇ ಎಂಬ ಗುಮಾನಿ ಅಭಿಮಾನಿಗಳಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ದೀಪಿಕಾ ದಾಸ್