Select Your Language

Notifications

webdunia
webdunia
webdunia
webdunia

ಪ್ರಭುದೇವ್ ಮುಂದಿನ ಸಿನಿಮಾಗೆ ಜಯಂ ರವಿ-ವಿಜಯ್ ಸೇತುಪತಿ ಆಯ್ಕೆ

ಪ್ರಭುದೇವ್ ಮುಂದಿನ ಸಿನಿಮಾಗೆ ಜಯಂ ರವಿ-ವಿಜಯ್ ಸೇತುಪತಿ ಆಯ್ಕೆ
, ಶನಿವಾರ, 4 ಜುಲೈ 2015 (10:20 IST)
ನಿರ್ದೇಶಕ- ನಿರ್ಮಾಪಕ -ನಟ  ಪ್ರಭುದೇವ ಅವರ ಮುಂದಿನ ನಿರ್ಮಾಣದ ಚಿತ್ರದಲ್ಲಿ ಜಯಂ ರವಿ ಮತ್ತು ವಿಜಯ್ ಸೇತುಪತಿ ಅವರು ಮುಖ್ಯ ಭೂಕೆಯಲ್ಲಿ ನಟಿಸಲು ಆಯ್ಕೆ ಆಗಿದ್ದಾರೆ. ಈ ಚಿತ್ರವನ್ನು ಲಕ್ಷ್ಮಣ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ದ್ವಿ ನಾಯಕರ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಜಯಂ ರವಿ ಅವರ ಇತ್ತೀಚಿನ ಚಿತ್ರ ರೋಮಿಯೋ ಜೂಲಿಯೆಟ್  ತಾಂತ್ರಿಕ ವರ್ಗವೇ ಈ ಚಿತ್ರದಲ್ಲೂ ಸಹಿತ ಮುಂದುವರೆಯುತ್ತದೆಯಂತೆ. 
ಚಿತ್ರಕ್ಕೆ ಡಿ ಇಮ್ಮನ್ ಸಂಗೀತ, ಸುಂದರ್ ರಾಜನ್ ಅವರ ಛಾಯಾಗ್ರಹಣವಿದೆ. ನಾಯಕಿಯ ಆಯ್ಕೆ ನಡೆದಿದೆ. ಜಯಂ ರವಿ  ನಟನೆಯ ಪ್ರಭುದೇವ ಅವರ ನಿರ್ದೇಶನದ  ಚಿತ್ರ ಎಂಗೆಯುಂ ಕಾದಲ್ ಚಿತ್ರದಲ್ಲಿ ಹನ್ಸಿಕ ಹೀರೋಯಿನ್ ಆಗಿದ್ದರು. ಅದು 2011 ರಲ್ಲಿ ಬಿಡುಗಡೆ ಆಗಿತ್ತು.

Share this Story:

Follow Webdunia kannada