Select Your Language

Notifications

webdunia
webdunia
webdunia
webdunia

ಕೆಜಿಎಫ್ ನೋಡಿ ಯಶ್ ಬಗ್ಗೆ ರಶ್ಮಿಕಾ ಮಂದಣ್ಣ ಕೊಟ್ಟ ಕಾಮೆಂಟ್ ಏನು ಗೊತ್ತಾ?

ಕೆಜಿಎಫ್ ನೋಡಿ ಯಶ್ ಬಗ್ಗೆ ರಶ್ಮಿಕಾ ಮಂದಣ್ಣ ಕೊಟ್ಟ ಕಾಮೆಂಟ್ ಏನು ಗೊತ್ತಾ?
ಬೆಂಗಳೂರು , ಬುಧವಾರ, 26 ಡಿಸೆಂಬರ್ 2018 (09:10 IST)
ಬೆಂಗಳೂರು: ಕೆಜಿಎಫ್ ಚಿತ್ರ ಇದೀಗ ಮನೆ ಮಾತಾಗಿದೆ. ಹಿಂದೊಮ್ಮೆ ಯಶ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಕೆಜಿಎಫ್ ನೋಡಿ ರಾಕಿಂಗ್ ಸ್ಟಾರ್ ಬಗ್ಗೆ ಮಾತನಾಡಿದ್ದಾರೆ.


ಕೆಜಿಎಫ್ ನೋಡಿದ ಬಳಿಕ ಇದೊಂದು  ಅದ್ಭುತ ಸಿನಿಮಾ. ಸಿನಿಮಾ ನೋಡುವಾಗ ನಾನು ಕೆಲವೊಂದು ಕ್ಷಣ ಸೀಟ್ ನಿಂದಲೇ ಎದ್ದು ಉದ್ವೇಗದಿಂದ ನೋಡುವಂತಾಯಿತು ಎಂದು ರಶ್ಮಿಕಾ ಟ್ವಿಟರ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.

‘ಕೆಜಿಎಫ್ ಓ ಮೈ ಗಾಡ್. ಯಶ್ ಸರ್, ಪ್ರಶಾಂತ್ ಸರ್, ಭುವನ್.. ಈ ಸಿನಿಮಾ ನೋಡುವುದೇ ಹಬ್ಬವಾಗಿತ್ತು. ಕೆಲವು ದೃಶ್ಯಗಳಂತೂ ನನ್ನ ಮೈನವಿರೇಳಿಸಿತು. ಎಂಥಾ ಅದ್ಭುತ ಸಿನಿಮಾ, ಮೇಕಿಂಗ್ ಅಂತೂ ಸೂಪರ್. ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಇಂತಹಾ ಸಿನಿಮಾ ಮಾಡಿದ ಹೊಂಬಾಳೆ ಫಿಲಂಸ್ ಗೆ ಧನ್ಯವಾದಗಳು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇಂತಹ ಮತ್ತಷ್ಟು ಸಿನಿಮಾಗಳು ಬರಲಿ’ ಎಂದು ರಶ್ಮಿಕಾ ಹಾರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ಹವಾ ನೋಡಿ ತಮಿಳು, ಮಲಯಾಳ, ತೆಲುಗು ಥಿಯೇಟರ್ ಮಾಲಿಕರ ನಿರ್ಧಾರವೇನು ಗೊತ್ತಾ?!