Select Your Language

Notifications

webdunia
webdunia
webdunia
webdunia

ಟಾಲಿವುಡ್ ನ ಹೊಸ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ ಡೇಟಿಂಗ್?!

ಟಾಲಿವುಡ್ ನ ಹೊಸ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ ಡೇಟಿಂಗ್?!
ಹೈದರಾಬಾದ್ , ಭಾನುವಾರ, 2 ಏಪ್ರಿಲ್ 2023 (09:20 IST)
Photo Courtesy: Twitter
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಈ ಮೊದಲು ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಇದೀಗ ಮತ್ತೊಬ್ಬ ನಟನ ಜೊತೆ ರಶ್ಮಿಕಾ ಹೆಸರು ಕೇಳಿಬರುತ್ತಿದೆ.

ಛತ್ರಪತಿ ಸಿನಿಮಾ ಖ್ಯಾತಿಯ ಬೆಲ್ಲಮಕೊಂಡ ಶ್ರೀನಿವಾಸ್ ಜೊತೆ ರಶ್ಮಿಕಾ ಇತ್ತೀಚೆಗೆ ಸುತ್ತಾಡುತ್ತಿದ್ದಾರೆ. ಏರ್ ಪೋರ್ಟ್ ನಲ್ಲಿ, ಈವೆಂಟ್ ಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.

ಇತ್ತೀಚೆಗೆ ಅಭಿಮಾನಿಗಳೊಂದಿಗೆ ರಶ್ಮಿಕಾ ಏರ್ ಪೋರ್ಟ್ ನಲ್ಲಿ ಕೇಕ್ ಕಟಿಂಗ್ ಮಾಡುವಾಗ ಶ್ರೀನಿವಾಸ್ ಕೂಡಾ ಜೊತೆಗಿದ್ದರು. ಇನ್ನೊಮ್ಮೆ ಈವೆಂಟ್ ಒಂದರ ರೆಡ್ ಕಾರ್ಪೆಟ್ ನಲ್ಲೂ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ರಶ್ಮಿಕಾ ಎಲ್ಲೇ ಹೋದರೂ ಶ್ರೀನಿವಾಸ್ ಜೊತೆಗಿರುವುದು ನೋಡಿದರೆ ಇಬ್ಬರ ನಡುವೆ ಬಾಂಧವ್ಯ ಜೋರಾಗಿದೆ ಎಂಬ ಸುದ್ದಿಗೆ ಪುಷ್ಠಿ ನೀಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅದೃಷ್ಟದ ದಿನದಂದೇ ಯಶ್ 19 ಘೋಷಣೆ?