Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನ ಪ್ರತಿವರ್ಷದ ಸಂಪ್ರದಾಯ ಮುಂದುವರಿಸಿದ ರಾಮ್ ಚರಣ್ ತೇಜ

Ramcharan

Krishnaveni K

ಹೈದರಾಬಾದ್ , ಬುಧವಾರ, 27 ಮಾರ್ಚ್ 2024 (10:13 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜಗೆ ಇಂದು ಜನ್ಮದಿನದ ಸಂಭ್ರಮ. ಪ್ರತಿವರ್ಷದ ಸಂಪ್ರದಾಯವನ್ನು ಅವರು ಈ ಬಾರಿಯೂ ಪಾಲಿಸಿದ್ದಾರೆ.

ರಾಮ್ ಚರಣ್ ಇದೀಗ 39 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿದರು. ಅವರೀಗ ಕೇವಲ ತೆಲುಗು ಮಾತ್ರವಲ್ಲ, ಇಡೀ ಭಾರತೀಯ ಸಿನಿಮಾಗೆ ಪರಿಚಿತರಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ ಎಂಬ ಹಣೆಪಟ್ಟಿ ಕಳಚಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಪ್ರತೀ ವರ್ಷ ಹುಟ್ಟುಹಬ್ಬದಂದು ರಾಮ್ ಚರಣ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಈ ವರ್ಷವೂ ಆ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಪತ್ನಿ ಉಪಾಸನಾ ಮತ್ತು ಮಗಳು ಕ್ಲಿನ್ ಕಾರಾ ಜೊತೆಗೆ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದಾರೆ.

ಮಗಳು ಕ್ಲಿನ್ ಕಾರಾ ಮುಖವನ್ನು ಇದುವರೆಗೆ ರಾಮ್ ಚರಣ್ ದಂಪತಿ ರಿವೀಲ್ ಮಾಡಿಲ್ಲ. ಹೀಗಾಗಿ ಉಪಾಸನಾ ಮಗಳನ್ನು ಸೀರೆಯ ಸೆರಗಲ್ಲಿ ಕ್ಯಾಮರಾ ಕಣ್ಣಿಗೆ ಕಾಣದಂತೆ ಮರೆ ಮಾಚಿದ್ದರು. ರಾಮ್ ಚರಣ್ ಆಗಮಿಸುತ್ತಿರುವ ಸುದ್ದಿ ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಜನ ತಿರುಪತಿಯಲ್ಲಿ ಸೇರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಟಾರ್ಚ್ ಹಿಡ್ಕೊಂಡು ದಟ್ಟ ಕಾಡಲ್ಲಿ ಚಾರು: ಸಿಕ್ಕಾಪಟ್ಟೆ ಟ್ರೋಲ್ ಆದ ರಾಮಚಾರಿ ಸೀರಿಯಲ್