Select Your Language

Notifications

webdunia
webdunia
webdunia
webdunia

ಪುಷ್ಪ 2 ಹಿಂದಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಬಿಕರಿ

ಪುಷ್ಪ 2 ಹಿಂದಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಬಿಕರಿ
ಮುಂಬೈ , ಶನಿವಾರ, 22 ಏಪ್ರಿಲ್ 2023 (06:59 IST)
ಮುಂಬೈ: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಾಯಕ, ನಾಯಕಿಯಾಗಿರುವ ಪುಷ್ಪ 2 ಸಿನಿಮಾ ಬಿಡುಗಡೆಗೂ ಮೊದಲೇ ಭಾರೀ ಬೇಡಿಕೆ ಹೊಂದಿದೆ.

ಇದೀಗ ಪುಷ್ಪ 2 ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಹಾಗಿದ್ದರೂ ಬಹುತಾರಾಗಣವಿರುವ ಈ ಸಿನಿಮಾದ ಡಿಜಿಟಲ್, ಸ್ಯಾಟ್ ಲೈಟ್ ಹಕ್ಕು ಖರೀದಿಗೆ ಈಗಲೇ ಭಾರೀ ಬೇಡಿಕೆಯಿದೆ.

ಜೊತೆಗೆ ಪರಭಾಷೆಗಳಲ್ಲೂ ಸಿನಿಮಾ ಖರೀದಿಗೆ ಬೇರೆ ಬೇರೆ ನಿರ್ಮಾಣ ಸಂಸ್ಥೆಗಳು ಭಾರೀ ಮೊತ್ತ ನೀಡಲು ಮುಂದಾಗಿವೆ. ಇದೀಗ ಹಿಂದಿ ರೈಟ್ಸ್ ಬರೋಬ್ಬರಿ 200 ಕೋಟಿಗೆ ಬಿಕರಿಯಾಗಿದೆ ಎಂಬ ಸುದ್ದಿ ಬಂದಿದೆ.  ಅಡಿಯೋ ರೈಟ್ಸ್ 75 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗಿದೆ. ಪುಷ್ಪ 2 ಸಿನಿಮಾ ಸುಮಾರು 2000 ಕೋಟಿ ರೂ. ಬಾಚಲು ಗುರಿ ಹಾಕಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಬೆದರಿಕೆ ಪತ್ರದ ಸುತ್ತ