Select Your Language

Notifications

webdunia
webdunia
webdunia
webdunia

ಹಾಫ್ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಕೃತಿ ಅಭಿನಯಿಸುತ್ತಿಲ್ಲವಂತೆ

ಹಾಫ್ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಕೃತಿ ಅಭಿನಯಿಸುತ್ತಿಲ್ಲವಂತೆ
, ಗುರುವಾರ, 24 ಡಿಸೆಂಬರ್ 2015 (11:39 IST)
ಈ ಹಿಂದೆ ಹಾಫ್ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಕಾಣಿಸಿಕೊಳ್ಳುತ್ತಾರೆ ಅನ್ನೋದು ಸುದ್ದಿಯಾಗಿತ್ತು.ಆದರೆ ಬಳಿಕ ಸುಶಾಂತ್ ಸಿನಿಮಾದಿಂದ ಡೇಟ್ ಸಮಸ್ಯೆಯಿಂದಾಗಿ ಹೊರ ನಡೆದಿದ್ದರು. ಬಳಿಕ ಆ ಜಾಗದಲ್ಲಿ ಆದ್ರೀಗ ಶಾಹೀದ್ ಕಪೂರ್ ಅವರ ಹೆಸರು ಕೇಳಿ ಬರುತ್ತಿದೆ. ಆದ್ರೆ ಸಿನಿಮಾದ ನಾಯಕಿ ಕೃತಿ ಸನೋನ್ ಅಂತಾ ಎಲ್ಲರೂ ಅಂದು ಕೊಂಡಿದ್ರು.ಆದ್ರೀಗ ಕೃತಿ ನಾನು ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಎಂದಿದ್ದಾರೆ.

ಕೃತಿ ಈಗಾಗಲೇ ದಿನೇಶ್ ವಿಜಯನ್ ಅವರ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರಂತೆ. ಆ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜ್ ಪೂತ್ ಅವರೇ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಹಾಗಾಗಿ ಸಿನಿಮಾದಲ್ಲಿ ನಾನು ಅಭಿನಯಿಸುತ್ತಿಲ್ಲ ಅಂತಾ ಕೃತಿ ಹೇಳಿದ್ದಾರೆ.ಇನ್ನು ಈಗಗಾಲೇ ಕೃತಿ ಅಭಿನಯದ ದಿಲ್ ವಾಲೇ ಸಿನಿಮಾ ರಿಲೀಸ್ ಆಗಿದೆ.ಆದ್ರೆ ಸಿನಿಮಾಕ್ಕೆ ಪ್ರೇಕ್ಷಕರಿಂದ ನಿರೀಕ್ಷಿಸಿದ ಪ್ರತಿಕ್ರಿಯೆ ಸಿಗದೇ ಇರೋದಕ್ಕೆ ಕೃತಿ ಬೇಜಾರಾಗಿದ್ದಾರೆ.
 
ಇನ್ನು ಚೇತನ್ ಭಗತ್  ಕಾದಂಬರಿ ಆಧಾರಿತ ಸಿನಿಮಾವಾಗಿದ್ದು, ಈ ಸಿನಿಮಾವನ್ನು ಮೋಹಿತ್ ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಏಕ್ತಾ ಕಪೂರ್ ಸಿನಿಮಾವನ್ನು ನಿರ್ಮಿಸುತ್ತಿದ್ದು ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.ಆದರೆ ಅದಕ್ಕಿಂತ ಹೆಚ್ಚಾಗಿ ಸಿನಿಮಾದ ತಾರಾಬಳಗದ ಬಗ್ಗೆ ಸಾಕಷ್ಟು ಕುತೂಹಲಗಳಿವೆ.

Share this Story:

Follow Webdunia kannada