Select Your Language

Notifications

webdunia
webdunia
webdunia
webdunia

ಜಾನ್ ಜಾನಿ ಜರ್ನಾಧನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಮಾಲಾಶ್ರೀ

ಜಾನ್ ಜಾನಿ ಜರ್ನಾಧನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಮಾಲಾಶ್ರೀ
, ಶನಿವಾರ, 16 ಏಪ್ರಿಲ್ 2016 (09:08 IST)
ಅಮರ್ ಅಕ್ಬರ್ ಅಂಥೋನಿ ಸಿನಿಮಾವನ್ನು ಯಾವೊಬ್ಬ ಕನ್ನಡ ಸಿನಿ ರಸಿಕ ಕೂಡ ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ಇದೀಗ ಕನ್ನಡದಲ್ಲಿ ಇದೇ ಸಿನಿಮಾವನ್ನು ನೆನಪಿಸುವಂತಹ ಸಿನಿಮಾವೊಂದು ಬರುತ್ತಿದೆ. ಅದೇ ಜಾನ್ ಜಾನಿ ಜನಾರ್ದನ ಸಿನಿಮಾ. ಈ ಸಿನಿಮಾದಲ್ಲಿ ನಟಿ ಮಾಲಾಶ್ರೀ ಅವರು ಕೂಡ ಅಭಿನಯಿಸುತ್ತಿದ್ದಾರಂತೆ.

ಗುರು ದೇಶಪಾಂಡೆ ನಿರ್ದೇಶನ ಈ ಸಿನಿಮಾದಲ್ಲಿ ಕನ್ನಡದ ಹ್ಯಾಂಡ್ ಸಮ್ ನಾಯಕರಾದ ಅಜಯ್ ರಾವ್ , ಲೂಸ ಮಾದ ಯೋಗೇಶ್ ಹಾಗೇ ಕೃಷ್ಣ ಅವರು ಅಬಿನಯಿಸುತ್ತಿದ್ದಾರೆ. ಮೂವರು ಹುಡುಗರ ಕುರಿತಾದ ಈ ಸಿನಿಮಾದಲ್ಲಿ ನಟಿ ಮಾಲಾಶ್ರೀ ಅವರು ಕೂಡ ಅಭಿನಯಿಸುತ್ತಿದ್ದಾರಂತೆ.ಅಂದ್ಹಾಗೆ ಇದು ಮಲೆಯಾಳಂನ ಸೂಪರ್ ಹಿಟ್ ಸಿನಿಮಾ ಅಮರ್ ಅಕ್ಬರ್ ಅಂಥೋನಿ ಸಿನಿಮಾದ ರಿಮೇಕ್ ಅಂತೆ.ಮಲೆಯಾಳಂನಲ್ಲಿ ಈ ಸಿನಿಮಾದಲ್ಲಿ ಪೃಥ್ವಿರಾಜ್,ಜಯಸೂರ್ಯ ಹಾಗೇ ಇಂದ್ರಜಿತ್ ಅವರು ಅಭಿನಯಿಸಿದ್ದರು.
 
ಈಗಾಗಲೇ ಗುರು ದೇಶಪಾಂಡೆ ಅವರು ಈ ಸಿನಿಮಾದ ರಿಮೇಕ್ ಹಕ್ಕನ್ನು ಪಡೆದುಕೊಂಡಿದ್ದಾರಂತೆ.ಎಂ.ಆರ್ ಬ್ಯಾನರ್ ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ ನಾಯಕರ ಆಯ್ಕೆಯಾಗಿದ್ದು ಸಿನಿಮಾ ತಂಡ ಇದೀಗ ಸಿನಿಮಾದ ನಾಯಕಿಯರ ಹುಡುಕಾಟದಲ್ಲಿ ತೊಡಗಿದೆಯಂತೆ.

Share this Story:

Follow Webdunia kannada