Select Your Language

Notifications

webdunia
webdunia
webdunia
webdunia

ಬೇಸತ್ತ ಅಭಿಮಾನಿಗಳಿಂದ ಕಿಚ್ಚ ಸುದೀಪ್ ಗೆ ಡಿಮ್ಯಾಂಡ್

Kiccha Sudeep

Krishnaveni K

ಬೆಂಗಳೂರು , ಸೋಮವಾರ, 8 ಏಪ್ರಿಲ್ 2024 (09:32 IST)
ಬೆಂಗಳೂರು: ಮ್ಯಾಕ್ಸ್ ಸಿನಿಮಾ ಅಪ್ ಡೇಟ್ ಗಾಗಿ ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿದೆ. ಇದುವರೆಗೆ ಚಿತ್ರತಂಡದಿಂದ ಒಂದೇ ಒಂದು ಸುದ್ದಿ ಬಂದಿಲ್ಲ. ಹೀಗಾಗಿ ಕಿಚ್ಚ ಸುದೀಪ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಅಪ್ ಡೇಟ್ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ಮ್ಯಾಕ್ಸ್. ಈ ಸಿನಿಮಾದ ಅಪ್ ಡೇಟ್ ನೀಡುತ್ತಿಲ್ಲವೆಂದು ಬಹಳ ದಿನಗಳಿಂದ ಅಭಿಮಾನಿಗಳಲ್ಲಿ ಅಸಮಾಧಾನವಿದೆ. ಏಪ್ರಿಲ್ ನಲ್ಲಿ ಸಿನಿಮಾ ಬಿಡುಗಡೆಯಾಗಬಹುದು ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ.

ಸಿನಿಮಾ ಬಿಡುಗಡೆ ಬಿಡಿ, ಚಿತ್ರದ ಬಗ್ಗೆ ಸಣ್ಣ ಕ್ಲೂ ಕೂಡಾ ಕೊಟ್ಟಿಲ್ಲ. ಕಿಚ್ಚ ಸುದೀಪ್ ಈಗಾಗಲೇ ನಾವು ಅಪ್ ಡೇಟ್ ಗೋಸ್ಕರ್ ಕೆಲಸ ಮಾಡಲ್ಲ. ಸಿನಿಮಾ ಕಂಪ್ಲೀಟ್ ಆದಾಗ ನಾವೇ ಅಪ್ ಡೇಟ್ ಕೊಡ್ತೀವಿ ಎಂದು ಹಲವು ಬಾರಿ ಸೋಷಿಯಲ್ ಮೀಡಿಯಾದಲ್ಲೇ ಸ್ಪಷ್ಟನೆ ಕೊಟ್ಟಿದ್ದಾರೆ.

ಹಾಗಿದ್ದರೂ ಅಭಿಮಾನಿಗಳ ಅಸಮಾಧಾನ ಮಾತ್ರ ತಣ್ಣಗಾಗಿಲ್ಲ. ಇದೀಗ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ಮತ್ತೊಮ್ಮೆ ಮ್ಯಾಕ್ಸ್ ಸಿನಿಮಾ ಅಪ್ ಡೇಟ್ ಕೊಡಿ ಎಂದು ಟ್ರೆಂಡ್ ಶುರು ಮಾಡಿದ್ದಾರೆ. ಇದಕ್ಕೆ ಕಿಚ್ಚನ ಕಡೆಯಿಂದ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್ ಬರ್ತ್ ಡೇಗೆ ಇಂದು ಪುಷ್ಪ 2 ಟೀಸರ್ ಬಿಡುಗಡೆ