Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಗೆದ್ದರೂ ಕಾರ್ತಿಕ್ ಮಹೇಶ್ ಗೆ ಇನ್ನೂ ಕಾರು ಸಿಕ್ಕಿಲ್ಲ

Karthik Mahesh

Krishnaveni K

ಬೆಂಗಳೂರು , ಶನಿವಾರ, 23 ಮಾರ್ಚ್ 2024 (11:59 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಮುಗಿದು ತಿಂಗಳೇ ಕಳೆದಿದೆ. ಆದರೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ತಮಗೆ ಇನ್ನೂ ಕಾರು ಸಿಕ್ಕಿಲ್ಲ ಎಂದಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿಜೇತ ಕಾರ್ತಿಕ್ ಮಹೇಶ್ ಗೆ 50 ಲಕ್ಷ ರೂ.ಜೊತೆಗೆ ಒಂದು ಎಲೆಕ್ಟ್ರಿಕಲ್ ಬೈಕ್, ಒಂದು ಕಾರು ಉಡುಗೊರೆಯಾಗಿ ಸಿಕ್ಕಿತ್ತು. ಆದರೆ ಈ ಪೈಕಿ ಕಾರು ಇನ್ನೂ ತಮ್ಮ ಕೈಗೆ ಸಿಕ್ಕಿಲ್ಲ ಎಂದು ಕಾರ್ತಿಕ್ ಮಹೇಶ್ ಹೇಳಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಈ ಮಾತು ಹೇಳಿದ್ದಾರೆ.

ಈ ವಿಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬೇಗ ಕಾರು ಸಿಗುವಂತಾಗಲಿ ಎಂದು ಹಾರೈಸಿದ್ದಾರೆ. ಅಷ್ಟಕ್ಕೂ ಕಾರು ಇನ್ನೂ ಕೈಗೆ ಬರದೇ ಇರಲು ಕಾರಣವೇನೆಂದೂ ಕಾರ್ತಿಕ್ ಮಹೇಶ್ ವಿವರಿಸಿದ್ದಾರೆ. ಬಿಗ್ ಬಾಸ್ ನಿಂದ ಗೆದ್ದ ಬಹುಮಾನದ ಬಗ್ಗೆ ಕೇಳಿದಾಗ ಅವರು ಹೇಳಿದ್ದಿಷ್ಟು.

‘ಬಿಗ್ ಬಾಸ್ ನಿಂದ ಗೆದ್ದ ಹಣ ಹಂತ ಹಂತವಾಗಿ ಬರುತ್ತಿದೆ. ಆದರೆ ಕಾರು ಇನ್ನೂ ಬಂದಿಲ್ಲ. ಇದಕ್ಕೆ ಕೆಲವು ಫಾರ್ಮ್ಯಾಲಿಟೀಸ್ ಇದೆ. ಹೀಗಾಗಿ ನಾಲ್ಕೈದು ತಿಂಗಳಾಗಬಹುದು. ದೆಹಲಿಯಿಂದ ಒಪ್ಪಿಗೆ ಸಿಗಬೇಕು’ ಎಂದು ಕಾರ್ತಿಕ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೂ.ಎನ್ ಟಿಆರ್ ದೇವರ ಸಿನಿಮಾದ ಲುಕ್ ಸೇಮ್ ಟು ಸೇಮ್ ರಿಷಬ್ ಶೆಟ್ಟಿಯಂತಿದೆ!