Select Your Language

Notifications

webdunia
webdunia
webdunia
webdunia

ದರ್ಶನ್ ಸಿನಿಮಾಗೆ ಕನ್ನಡದವರೇ ಹೀರೋಯಿನ್ ಎಂದ ನಿರ್ದೇಶಕರು

Darshan

Krishnaveni K

ಬೆಂಗಳೂರು , ಭಾನುವಾರ, 4 ಫೆಬ್ರವರಿ 2024 (14:39 IST)
Photo Courtesy: Twitter
ಬೆಂಗಳೂರು: ನಟ ದರ್ಶನ್ ಮುಂಬರುವ ಸಿನಿಮಾಗೆ ನಾಯಕಿ ಕುರಿತಂತೆ ಇದ್ದ ಗಾಳಿ ಸುದ್ದಿಗಳಿಗೆ ನಿರ್ದೇಶಕ ಮಿಲನ ಪ್ರಕಾಶ್ ಸ್ಪ‍ಷ್ಟನೆ ನೀಡಿದ್ದಾರೆ.

ದರ್ಶನ್ ಮುಂದಿನ ಸಿನಿಮಾಗೆ ಡೆವಿಲ್ ಎಂದು ಟೈಟಲ್ ಫಿಕ್ಸ್ ಆಗಿದೆ. ಈಗಾಗಲೇ ಚಿತ್ರದ ಮುಹೂರ್ತ ಕೂಡಾ ನೆರವೇರಿದೆ. ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬ ದಿನ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ದರ್ಶನ್ ಸಿನಿಮಾ ಎಂದರೆ ಕೇಳಬೇಕೇ? ಈಗಾಗಲೇ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದೆ.

ಡೆವಿಲ್ ಸಿನಿಮಾಗೆ ಪರಭಾಷೆಯ ಸ್ಟಾರ್ ನಟಿಯೊಬ್ಬರನ್ನು ಕರೆತರಲಾಗುತ್ತಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಬಗ್ಗೆ ಇದೀಗ ನಿರ್ದೇಶಕ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ. ನಾವಾಗಿಯೇ ಅಧಿಕೃತವಾಗಿ ಯಾವುದೇ ಸುದ್ದಿ ಪ್ರಕಟಿಸುವವರೆಗೂ ಯಾವುದೇ ಗಾಳಿ ಸುದ್ದಿಯನ್ನು ನಂಬಬೇಡಿ ಎಂದಿದ್ದಾರೆ.

ಅಷ್ಟೇ ಅಲ್ಲ, ಚಿತ್ರಕ್ಕೆ ಪರಭಾಷಾ ನಾಯಕಿಯನ್ನು ಕರೆತರುವ ಯೋಚನೆಯಿಲ್ಲ ಎಂದಿದ್ದಾರೆ. ಏನೇ ಇದ್ದರೂ ನಾವೇ ನಿಮಗೆ ತಿಳಿಸುತ್ತೇವೆ. ದರ್ಶನ್ ಸಿನಿಮಾಗೆ ಖಂಡಿತಾ ಕನ್ನಡತಿಯೇ ಹೀರೋಯಿನ್ ಆಗುತ್ತಾರೆ ಎಂದು ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಪರಭಾಷಾ ನಾಯಕಿಯ ರೂಮರ್ ಗಳಿಗೆ ತೆರೆ ಎಳೆದಿದ್ದಾರೆ. ಆರಂಭದಿಂದಲೂ ದರ್ಶನ್ ಇಂತಹದ್ದೊಂದು ಪರಿಪಾಠ ಪಾಲಿಸಿಕೊಂಡೇ ಬಂದಿದ್ದಾರೆ. ತಮ್ಮ ಸಿನಿಮಾಗೆ ಕನ್ನಡತಿಯರನ್ನೇ ನಾಯಕಿಯಾಗಿ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲೂ ಅದು ಮುಂದುವರಿಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬ ಡಿ ಬಾಸ್ ದರ್ಶನ್ ಕಡೆಯಿಂದ ವಿಶೇಷ ಸುದ್ದಿ