Select Your Language

Notifications

webdunia
webdunia
webdunia
webdunia

ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣ; ನಟ ಸಲ್ಮಾನ್ ಖಾನ್ ದೋಷಿ, ಉಳಿದ ನಾಲ್ವರು ಆರೋಪದಿಂದ ಖುಲಾಸೆ

ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣ; ನಟ ಸಲ್ಮಾನ್ ಖಾನ್ ದೋಷಿ, ಉಳಿದ ನಾಲ್ವರು ಆರೋಪದಿಂದ ಖುಲಾಸೆ
ರಾಜಸ್ಥಾನ , ಗುರುವಾರ, 5 ಏಪ್ರಿಲ್ 2018 (11:48 IST)
ರಾಜಸ್ಥಾನ : ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಸಹ ನಟ ನಟಿಯರು 20 ವರ್ಷಗಳ ಹಿಂದೆ ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ(ಇಂದು) ರಾಜಸ್ಥಾನದ ಜೋಧ್ ಪುರ ಕೋರ್ಟ್ ಅಂತಿಮ ತೀರ್ಪುನ್ನು ಪ್ರಕಟಿಸಿದೆ.


1998ರ ಅಕ್ಟೋಬರ್‌ 1 ಮತ್ತು 2ರಂದು 'ಹಮ್ ಸಾಥ್‌ ಸಾಥ್‌ ಹೈ' ಚಿತ್ರದ ಚಿತ್ರೀಕರಣದ ವೇಳೆ ಜೋಧ್‌ಪುರ್‌ ಸಮೀಪದ ಕಂಕಣಿ ಗ್ರಾಮದಲ್ಲಿ ಎರಡು ಕೃಷ್ಣಮೃಗ ಬೇಟೆಯಾಡಿದ ಆರೋಪದ ಮೇಲೆ  ಬಾಲಿವುಡ್‌‌ ನಟ ಸಲ್ಮಾನ್ ಖಾನ್ ಸೇರಿದಂತೆ ನಟ ಸೈಫ್ ಅಲಿ ಖಾನ್, ಹಾಗೂ ನಟಿಯರಾದ ಸೋನಾಲಿ ಬೇಂದ್ರೆ, ಟಬು ಹಾಗೂ ನೀಲಂ ಅವರ ಮೇಲೆ ಕೇಸು ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 28ರಂದು ಪ್ರಕರಣದ ಅಂತಿಮ ವಾದ-ಪ್ರತಿವಾದ ನಡೆದಿದ್ದು, ಇಂದು ಪ್ರಕರಣದ ಅಂತಿಮ ತೀರ್ಪನ್ನು ನ್ಯಾ.ದೇವ್‌ಕುಮಾರ್‌ ಖತ್ರಿ ಅವರು ಪ್ರಕಟಿಸಿದ್ದಾರೆ. ಇದರ ಪ್ರಕಾರ  ನಟ ಸಲ್ಮಾನ್ ಖಾನ್ ಅವರು ದೋಷಿ ಎಂದು ಪ್ರಕಟಿಸಲಾಗಿದೆ. ಆದರೆ ಉಳಿದ ನಾಲ್ವರು ನಟ-ನಟಿಯರನ್ನು ಈ ಆರೋಪದಿಂದ ಖುಲಾಸೆಗೊಳಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ರನ್ನು ನೋಡುವುದಕ್ಕಾಗಿ ಈ ಬಾಲಕಿ ಇಂತಹ ಸಾಹಸಕ್ಕೆ ಕೈ ಹಾಕುವುದಾ…?