Select Your Language

Notifications

webdunia
webdunia
webdunia
webdunia

ಭಟ್ಟರ ಶೃಂಗಾರ ಸಾಹಿತ್ಯಕ್ಕೆ ನವರಸನಾಯಕ ಜಗ್ಗೇಶ್ ಟಚಿಂಗ್ ಟಚಿಂಗ್ ಸೌಂಡ್!

ಭಟ್ಟರ ಶೃಂಗಾರ ಸಾಹಿತ್ಯಕ್ಕೆ ನವರಸನಾಯಕ ಜಗ್ಗೇಶ್ ಟಚಿಂಗ್ ಟಚಿಂಗ್ ಸೌಂಡ್!
ಬೆಂಗಳೂರು , ಗುರುವಾರ, 27 ಡಿಸೆಂಬರ್ 2018 (10:20 IST)
ಬೆಂಗಳೂರು: ಯೋಗರಾಜ ಭಟ್ಟರ ಪಂಚತಂತ್ರ ಸಿನಿಮಾದ ಹಾಡೊಂದು ಈಗ ಯೂ ಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ. ಈ ಶೃಂಗಾರದ ಹಾಡನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಮೈ ಬಿಸಿಯೇರಿಸಿಕೊಂಡಿದ್ದಾರೆ.


ಈ ನಡುವೆ ಭಟ್ಟರೇ ಬರೆದಿರುವ ಸಾಹಿತ್ಯಕ್ಕೆ ಅವರ ಸ್ನೇಹಿತ, ನವರಸನಾಯಕ ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ಸಾಹಿತ್ಯ ಸಮೇತ ಸೌಂಡ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದನ್ನು ಭಟ್ಟರೂ ಮೆಚ್ಚಿಕೊಂಡಿದ್ದಾರೆ.

ಶೃಂಗಾರದ ಹೊಂಗೇ ಮರ ಎಂಬ ಸಾಹಿತ್ಯವನ್ನು ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ಲವ್ ಲೈಕ್ ಎ ಹೊಂಗೇ ಟ್ರೀ ಟೂ ಫ್ಲವರ್ಸ್ ಕಮಿಂಗ್, ಸೇ ವಿತ್ ಮಿ.. ಟೂ ಬಾಡಿ ಟಚಿಂಗ್...’ ಎಂಬುದಾಗಿ ಜಗ್ಗೇಶ್ ತಮ್ಮದೇ ಸಾಹಿತ್ಯ ಬರೆದು ಅದೇ ದಾಟಿಯಲ್ಲಿ ಹಾಡಿ ಭಟ್ಟರು ಮತ್ತು ಅಭಿಮಾನಿಗಳ ಮೊಗದಲ್ಲಿ ನಗು ಮೂಡಿಸಿದ್ದಾರೆ. ಜಗ್ಗೇಶ್ ಹಾಡಿರುವ ವರ್ಷನ್ ನ್ನು ಯೋಗರಾಜ್ ಭಟ್ಟರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಾಕಿಕೊಂಡಿದ್ದು, ಕೇಳಲು ಫನ್ನಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಭಟ್ಟರ ‘ಪಂಚತಂತ್ರ’ದ ಈ ಹಾಡು ಕೇಳಿದರೆ ಕೊರೆವ ಚಳಿಯಲ್ಲೂ ಮೈ ಬಿಸಿಯೇರುವುದು!