Select Your Language

Notifications

webdunia
webdunia
webdunia
webdunia

ಬಾಲಿವುಡ್ ನಲ್ಲಿ ಆ್ಯಕ್ಷನ್ ಕಟ್ ಹೇಳಲು ಹೊರಟ ನಿರ್ದೇಶಕ ಇಂದ್ರಜಿತ್ ಲಂಕೇಶ್!

ಬಾಲಿವುಡ್ ನಲ್ಲಿ ಆ್ಯಕ್ಷನ್ ಕಟ್ ಹೇಳಲು ಹೊರಟ ನಿರ್ದೇಶಕ ಇಂದ್ರಜಿತ್ ಲಂಕೇಶ್!
ಬೆಂಗಳೂರು , ಶನಿವಾರ, 27 ಜನವರಿ 2018 (05:51 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದು, ಈಗ ಬಾಲಿವುಡ್ ನಲ್ಲಿ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದಾರೆ.

 
ಇಂದ್ರಜಿತ್ ಲಂಕೇಶ್ ಅವರು ಈಗ ಹಿಂದಿ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದಾರೆ. ಸಿನಿಮಾದ ಕತೆ, ಕಲಾವಿದರ ಆಯ್ಕೆ, ಸಂಗೀತ ಸಂಯೋಜನೆ ಇತ್ಯಾದಿ  ಕೆಲಸಗಳು ಈಗಾಗಲೆ ಆಗಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ನೀಡುವುದಾಗಿ ತಿಳಿಸಿದ್ದಾರೆ.’ ಕನ್ನಡದ ನಿರ್ದೇಶಕರೊಬ್ಬರು ಬಾಲಿವುಡ್ ಗೆ ಹೋಗಿ ಹಿಂದಿ ಸಿನಿಮಾ ಮಾಡುವುದು ಸುಲಭವಲ್ಲ. ಆ ಕೆಲಸವನ್ನು ಮಾಡಬೇಕು ಅಂತ ಯೋಚನೆ ಮಾಡಿದೆ. ಇದು ಯಾವುದೆ ಕಾರಣಕ್ಕೂ ಹಿಂದಿಗೆ ಡಬ್ ಮಾಡುವ ಸಿನಿಮಾವಲ್ಲ. ನೇರವಾಗಿ ಅದೇ ಭಾಷೆಯಲ್ಲಿಯೇ ತಯಾರು ಮಾಡುತ್ತೇನೆ’ ಎಂದು  ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣವೀರ್ ಸಿಂಗ್ ಕಿಸ್ಸಿಂಗ್ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು...?