Select Your Language

Notifications

webdunia
webdunia
webdunia
webdunia

ಹೃತಿಕ್ ರೋಶನದ್ದು ಪರ್ಫೆಕ್ಟ್ ಬಾಡಿ, ತುಂಬಾ ಹಾಟ್.... ಅವರೊಂದಿಗೆ ನಟಿಸುವಾಸೆ

ಹೃತಿಕ್ ರೋಶನದ್ದು ಪರ್ಫೆಕ್ಟ್ ಬಾಡಿ, ತುಂಬಾ ಹಾಟ್.... ಅವರೊಂದಿಗೆ ನಟಿಸುವಾಸೆ
, ಬುಧವಾರ, 15 ಅಕ್ಟೋಬರ್ 2014 (12:07 IST)
ಗ್ರೀಕ್ ಸುಂದರ ಎನ್ನುವ ಅಗ್ಗಳಿಕೆ ಪಡೆದ ನಟ ಹೃತಿಕ್ ರೋಶನ್. ಅವರ ಒಂದೊಂದುಸಿನಿಮಾ ಸಹಿತ ಹೃತಿಕ್ ರೂಪ, ಅಭಿನಯದಿಂದ ಯಶಸ್ಸು ಗಳಿಸುತ್ತಿದೆ. ಅವರ ಜೊತೆ ಒಮ್ಮೆಯಾದರೂ ನಟಿಸ ಬೇಕು ಎನ್ನುವ ಕನಸು ಬಹಳಷ್ಟು ನಟಿಯರ ಕನಸಾಗಿದೆ. ಅದಕ್ಕೆ ಕಾರಣ ಅವರ ಬಗ್ಗೆ ಇರುವ ಕ್ರೇಜ್.
 
ಬಾಲಿವುಡ್ ನವರು ಬಯಸುವುದು ಅಂದ್ರೆ ಯಾರಿಗೂ ಏನು ಅನ್ನಿಸಲ್ಲ. ಆದರೆ ಅದೇ ಹಾಲಿವುಡ್ ನಟಿಯರಿಗೂ ಸಹಿತ ಇಂತಹ ಆಸೆ ಉಂಟಾದರೆ ? ಹಾಗೆ ಆಗಿದೆ ಈಗ. ಹಾಲಿವುಡ್ ನಟಿ ಪಾರಿಸ್ ಹಿಲ್ಟನ್ ಗೆ ಹೃತಿಕ್ ರೋಶನ್ ಜೊತೆ ಅಭಿನಯಿಸುವ ಆಸೆ ಉಂಟಾಗಿದೆ. 
 
ಹೃತಿಕ್ ಜೊತೆ  ಲವರ್  ಆಗಿ ನಟಿಸುವ ಆಸೆ ಮನದಲ್ಲಿ ಇದ್ದು ಅದು ಟ್ವೀಟ್  ಮೂಲಕ ವ್ಯಕ್ತವಾಗಿದೆ. ಹೃತಿಕ್ ಜಂಟಲ್ ಮ್ಯಾನ್, ನೈಸ್ ಮೆನ್, ಪರ್ಫೆಕ್ಟ್ ಬಾಡಿ, ತುಂಬಾ ಹಾಟ್ ಎಂದು ಹೊಗಳಿದ್ದಾಳೆ ಆಕೆ.
 
ಈ ವಾರ್ತೆ ತಿಳಿದೊಡನೆ ಅನೇಕ ಮಂದಿ ಬಾಲಿವುಡ್ ನಿರ್ಮಾಪಕರು ಆಕೆಯ ಟಚ್ ಹೊಂದಿದ್ದಾರಂತೆ. ಎಲ್ಲ ಸರಿಯಾದಲ್ಲಿ ಹೃತಿಕ್ ಜೊತೆ  ಮುಂದಿನ ವರ್ಷ ಒಂದು ಸಿನಿಮಾ ದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಡಿದೆ. ಇತ್ತೀಚಿಗೆ  ದುಬೈ ನಲ್ಲಿ  ನಡೆದ ಕಾರ್ಯಕ್ರಮ ಒಂದರಲ್ಲಿ ಹೃತಿಕ್   ರನ್ನು ಪಾರಿಸ್ ಭೇಟಿ ಆಗಿದ್ದರು. ಅಲ್ಲಿ ನೋಡಿ ಇಲ್ಲಿ ಬರೆದಿದ್ದಾರೆ ಆಹಾ! 
 

Share this Story:

Follow Webdunia kannada