Select Your Language

Notifications

webdunia
webdunia
webdunia
webdunia

ರಾಧಿಕಾ ನಂತರ ಪ್ರಿಯಾಮಣಿ ಕಡೆಯಿಂದ ಬಂದಿದೆ ಅಭಿಮಾನಿಗಳಿಗೆ ಸಿಹಿ ಸುದ್ದಿ

ರಾಧಿಕಾ ನಂತರ ಪ್ರಿಯಾಮಣಿ ಕಡೆಯಿಂದ ಬಂದಿದೆ ಅಭಿಮಾನಿಗಳಿಗೆ ಸಿಹಿ ಸುದ್ದಿ
ಬೆಂಗಳೂರು , ಬುಧವಾರ, 1 ಆಗಸ್ಟ್ 2018 (12:48 IST)
ಬೆಂಗಳೂರು : ಬಹುಭಾಷಾ ನಟಿ ಪ್ರಿಯಾಮಣಿ ಟ್ವೀಟ್ ವೊಂದನ್ನು ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದ್ದಾರೆ.


 ಹೌದು ನಟಿ  ಪ್ರಿಯಾಮಣಿ ಇತ್ತೀಚೆಗೆ ಟ್ವೀಟರ್ ನಲ್ಲಿ ತಮ್ಮ ಪತಿ ಮುಸ್ತಾಫ್ ರಾಜ್ ಜೊತೆಯಿರುವ ಫೋಟೊವೊಂದನ್ನು ಪೋಸ್ಟ್ ಮಾಡಿ ಅದರ ಜೊತೆಗೆ “ನಾನು ಮತ್ತು ನನ್ನ ಪತಿ ಮುಸ್ತಾಫ್ ರಾಜ್ ಕಡೆಯಿಂದ ಸಮ್‍ಥಿಂಗ್ ಇಂಟ್ರೆಸ್ಟಿಂಗ್ ಹಾಗೂ ಫನ್ ಸಂಗತಿಯೊಂದು ನಿಮ್ಮ ಮುಂದೆ ಬರಲಿದೆ. ವೇಟ್ ಆಂಡ್ ವಾಚ್” ಎಂದು ಟ್ವೀಟ್ ಮಾಡಿದ್ದಾರೆ.


ಇದಕ್ಕೆ ಪ್ರಿಯಾಮಣಿ  ಗೆಳತಿ ನಟಿ ಪರೂಲ್ ಯಾದವ್ ಮಗು ಐಸ್ ಕ್ರೀಂ ತಿನ್ನುವ ಜಿಫ್ ಹಾಕಿ ಶುಭಾಶಯ ಕೋರಿದ್ದಾರೆ. ಪರೂಲ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಪ್ರಿಯಾಮಣಿ ಲವ್ ಸೂಚಕದ ಎಮೋಜಿ ಹಾಕಿ ಉತ್ತರಿಸಿದ್ದಾರೆ.


ಇದನ್ನು ನೋಡಿದ ಅಭಿಮಾನಿಗಳು ಪ್ರಿಯಾಮಣಿ ಅಮ್ಮ ಆಗುತ್ತಿದ್ದಾರೆ ಎಂದು ತಿಳಿದು ಅವರಿಗೆ ಶುಭ ಕೋರುತ್ತಿದ್ದಾರೆ. ಜೂನಿಯರ್ ಪ್ರಿಯಾಮಣಿ ಬರುತ್ತಿರಬಹುದು ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ಚೋಟಾ ಪ್ರಿಯಾಮಣಿ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ನಟಿ ಪ್ರಿಯಾಮಣಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದ್ದರಿಂದ ಸದ್ಯಕ್ಕೆ  ಪ್ರಿಯಾಮಣಿ ಅವರ  ಸ್ಪೆಷಲ್ ಸುದ್ದಿ ಏನು ಎಂಬುದು ಕಾದು ನೋಡಬೇಕಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ವಿರುದ್ಧ ಸಿಎಂ, ಫಿಲಂ ಚೇಂಬರ್ ಗೆ ದೂರು