Select Your Language

Notifications

webdunia
webdunia
webdunia
webdunia

ಚಿತ್ರದುರ್ಗದಲ್ಲಿ ನಡಿತಿದೆ ದೊಡ್ಮನೆ ಹುಡ್ಗ ಸಿನಿಮಾದ ಹಾಡಿನ ಶೂಟಿಂಗ್

ಚಿತ್ರದುರ್ಗದಲ್ಲಿ ನಡಿತಿದೆ ದೊಡ್ಮನೆ ಹುಡ್ಗ ಸಿನಿಮಾದ ಹಾಡಿನ ಶೂಟಿಂಗ್
, ಸೋಮವಾರ, 27 ಜೂನ್ 2016 (09:35 IST)
ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ದೊಡ್ಮನೆ ಹುಡ್ಗ ಸಿನಿಮಾ ಇದೀಗ ಒಂದು ದಾಖಲೆಗೆ ಸಾಕ್ಷಿಯಾಗಿದೆ. ಸಿನಿಮಾದ ಅಭಿಮಾನಿಗಳೇ ನಮ್ಮನೆ ದೇವ್ರು ಹಾಡಿನ ಚಿತ್ರೀಕರಣ ಇದೀಗ ಭರ್ಜರಿಯಾಗಿ ನಡೀತಾ ಇದೆ. ಮೊನ್ನೆ ಮೊನ್ನೆ ಬಳ್ಳಾರಿಯಲ್ಲಿ ಚಿತ್ರೀಕರಣ ಮುಗಿಸಿದ ಚಿತ್ರತಂಡ ಇದೀಗ ಚಿತ್ರದುರ್ಗದಲ್ಲಿ ಠಿಕಾಣಿ ಹೂಡಿದೆ.

ಅಂದ್ಹಾಗೆ ಅಭಿಮಾನಿಗಳೇ ನಮ್ಮನೆ ದೇವ್ರು ಹಾಡನ್ನು ತುಂಬಾನೇ ಅದ್ಧೂರಿಯಾಗಿ ಈ ಹಾಡನ್ನು ಚಿತ್ರೀಕರಿಸಲಾಗುತ್ತಿದೆ. ಬರೋಬ್ಬರಿ ಒಂದು ಕೋಟಿ 75 ಲಕ್ಷ ರೂಪಾಯಿ ಖರ್ಚು ಮಾಡಿ ಈ ಸಾಂಗ್ ನ್ನು ಶೂಟ್ ಮಾಡಲಾಗುತ್ತಿದೆ. ಕನ್ನಡ ಸಿನಿಮಾ ರಂಗದ ಇತಿಹಾಸದಲ್ಲೇ ಇದೊಂದು ವಿಭಿನ್ನವಾದ ಹಾಡಂತೆ. ಮೊನ್ನೆ ಬಳ್ಳಾರಿಯ ದುರ್ಗಮ್ಮ ದೇವಿ ಮೈದಾನದಲ್ಲಿ ಹಾಡಿನ ಕೆಲವು ಭಾಗದ ಚಿತ್ರೀಕರಣ ಮಾಡಲಾಯ್ತು. ಇದೀಗ ಚಿತ್ರದುರ್ಗದಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ.ಅಲ್ಲಿಂದ ಬಳಿಕ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲೂ ಹಾಡಿನ ಚಿತ್ರೀಕರಣ ನಡೆಯಲಿದೆ. 
 
ಇದು ಪುನೀತ್ ರಾಜ್ ಕುಮಾರ್ ಅವರ ವೃತ್ತಿ ಬದುಕಿನ ಸ್ಪೆಷಲ್ ಸಾಂಗ್. ಸತ್ಯ ಹೆಗಡೆ ಅವರ ಸಾರಥ್ಯದಲ್ಲಿ 19 ಮಂದಿ ಕ್ಯಾಮೆರಾ ಮೆನ್ ಗಳು ಈ ಹಾಡನ್ನು ಚಿತ್ರೀಕರಿಸುತ್ತಿದ್ದಾರೆ. ಇನ್ನು 100 ತಂತ್ರಜ್ಞರ ನರವಿನಿಂದ ಈ ಹಾಡನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಈಗಾಗಲೇ ಸಿನಿಮಾ ನಾನಾ ಕಾರಣಗಳಿಂದ ಸುದ್ದಿಯಲ್ಲಿದ್ದು ಸಿನಿಮಾದ ಈ ಸ್ಪೆಷಲ್ ಸಾಂಗ್ ನ್ನು ನೋಡೋದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಾವ್ಯ ಶಾ ಅವರೊಂದಿಗೆ ಒಲಿದು ಬಂದಿದೆ ಕನ್ನಡದಲ್ಲಿ ಮತ್ತೊಂದು ಅವಕಾಶ