Select Your Language

Notifications

webdunia
webdunia
webdunia
webdunia

ದರ್ಶನ್ ಹುಟ್ಟುಹಬ್ಬಕ್ಕೆ ಸಿಂಧೂರ ಲಕ್ಷಣ, ಡೆವಿಲ್ ಸಿನಿಮಾ ಘೋಷಣೆ

Darshan

Krishnaveni K

ಬೆಂಗಳೂರು , ಶುಕ್ರವಾರ, 16 ಫೆಬ್ರವರಿ 2024 (10:34 IST)
Photo Courtesy: Twitter
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ನಿಮಿತ್ತ ಇಂದು ಅಭಿಮಾನಿಗಳಿಗೆ ಭರ್ಜರಿ ಕೊಡುಗೆ ಸಿಕ್ಕಿದೆ. ದರ್ಶನ್ ನಾಯಕರಾಗಿರುವ ಎರಡು ಸಿನಿಮಾಗಳ ಅಪ್ ಡೇಟ್ ಸಿಕ್ಕಿದೆ.

ಪ್ರಕಾಶ್ ವೀರ್ ನಿರ್ದೇಶಿಸಲಿರುವ ‘ಡೆವಿಲ್ ದಿ ಹೀರೋ’ ಸಿನಿಮಾದ ಫಸ್ಟ್ ಲುಕ್ ಟೀಸರ್ ನಿನ್ನೆ ಮಧ‍್ಯರಾತ್ರಿಯೇ ಬಿಡುಗಡೆಯಾಗಿದೆ. ಈ ಫಸ್ಟ್ ಲುಕ್ ನೋಡುತ್ತಿದ್ದರೆ ದರ್ಶನ್ ಸ್ವಲ್ಪ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಪಕ್ಕಾ ಆಗಿದೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ದರ್ಶನ್ ಗೆ ಕಾಟೇರ ಸಿನಿಮಾ ಯಶಸ್ಸು ತಂದುಕೊಟ್ಟಿತ್ತು. ಇದೀಗ ಅದೇ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ನೇತೃತ್ವದಲ್ಲಿ ದರ್ಶನ್ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ತರುಣ್ ನಿರ್ದೇಶನದ ‘ಸಿಂಧೂರ ಲಕ್ಷ್ಮಣ’ ಸಿನಿಮಾ ಘೋಷಣೆಯಾಗಿದ್ದು ಫಸ್ಟ್ ಲುಕ್ ಕೂಡಾ ಬಿಡುಗಡೆ ಮಾಡಲಾಗಿದೆ. ಐತಿಹಾಸಿಕ ಪಾತ್ರಗಳಲ್ಲಿ ದರ್ಶನ್ ಈ ಹಿಂದೆಯೂ ಮಿಂಚಿದ್ದರು. ಇದೀಗ ಮತ್ತೊಮ್ಮೆ ಅಂತಹದ್ದೇ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾ ಮಾಡುವ ಬಗ್ಗೆ ಹಲವು ಸಮಯದಿಂದ ಸುದ್ದಿ ಕೇಳಿಬರುತ್ತಲೇ ಇತ್ತು. ಇದೀಗ ಖಚಿತವಾಗಿದೆ. ಇದು ದರ್ಶನ ಅವರ 59 ನೇ ಸಿನಿಮಾವಾಗಲಿದೆ.

ಜೋಗಿ ಪ್ರೇಮ್ ನಿರ್ದೇಶನದ ಮತ್ತೊಂದು ಸಿನಿಮಾವನ್ನು ದರ್ಶನ್ ಮಾಡುತ್ತಿದ್ದಾರೆ. ಆ ಸಿನಿಮಾದ ಅಪ್ ಡೇಟ್ ಕೂಡಾ ಇಂದೇ ಸಿಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಈ ಮೂಲಕ ದರ್ಶನ್ ಹುಟ್ಟುಹಬ್ಬಕ್ಕೆ ಇಂದು ಒಂದೇ ದಿನ ಮೂರು ಸಿನಿಮಾಗಳ ಅಪ್ ಡೇಟ್ ಸಿಕ್ಕಂತಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯ ರಾತ್ರಿಯಿಂದಲೇ ದರ್ಶನ್ ಮನೆ ಮುಂದೆ ಜನಸಾಗರ