Select Your Language

Notifications

webdunia
webdunia
webdunia
webdunia

ವಾಲೆಂಟೈನ್ಸ್ ಡೇಗೆ ದೀಪಿಕಾಗೆ ಸ್ಪೆಷಲ್ ಗಿಫ್ಟ್ ನೀಡ್ತಾರಂತೆ ರಣ್ವೀರ್

ವಾಲೆಂಟೈನ್ಸ್ ಡೇಗೆ ದೀಪಿಕಾಗೆ ಸ್ಪೆಷಲ್ ಗಿಫ್ಟ್ ನೀಡ್ತಾರಂತೆ ರಣ್ವೀರ್
ಮುಂಬೈ , ಶನಿವಾರ, 13 ಫೆಬ್ರವರಿ 2016 (12:11 IST)
ಪ್ರೇಮಿಗಳ ದಿನಾಚರಣೆ ಹತ್ರ ಬಂದ್ರೆ ಸಾಕು.  ಪ್ರೇಮಿಗಳ ದಿನಾಚರಣೆಗೆ ಪ್ರೇಮಿಗಳು ತಯಾರಾಗಿ ಬಿಡುತ್ತಾರೆ. ಎಲ್ಲಿ ಹೋಗೋದು ಹೇಗೆ ಆಚರಿಸೋದು ಅಂತಾ ತಿಂಗಳೇ ಹಿಂದೆಯೇ ಪ್ಲಾನ್ ರೆಡಿಯಾಗಿರುತ್ತೆ. ಬಾಲಿವುಡ್ ನ ಕ್ಯೂಟ್ ಜೋಡಿ ದೀಪಿಕಾ ಹಾಗೂ ರಣ್ವೀರ್ ಕಪೂರ್ ಕೂಡ ಇದಕ್ಕೆ  ಹೊರತಾಗಿಲ್ಲ.
 
 ದೀಪಿಕಾ ಪಡುಕೋಣೆ ಸದ್ಯ ಹಾಲಿವುಡ್ XXX ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ದೀಪಿಕಾ ಟೊರ್ಯಾಂಟೊದಲ್ಲಿದ್ದಾರೆ.   ದೀಪಿಕಾ ಹಾಗೂ ರಣ್ ವೀರ್ ಸಿಂಗ್ ಈ ಬಾರಿಯ ಪ್ರೇಮಿಗಳ ದಿನಾಚರಣೆಯನ್ನು ಅಲ್ಲೇ ಆಚರಿಸಲಿದ್ದಾರೆ.ಹಾಗಂಥ ದಿಪ್ಪಿ ರಣ್ ವೀರ್ ಸಿಂಗ್ ಟೋರ್ಯಾಂಟೋಗೆ ಹೋಗುತ್ತಿರೋ ವಿಚಾರ ಗೊತ್ತಿಲ್ಲವಂತೆ.

ಸಪ್ರೈಸ್ ಆಗಿ ಟೋರ್ಯಾಂಟೋಗೆ ತೆರಳಿ ಅಲ್ಲಿ ದಿಪ್ಪಿಗೆ ಸಪ್ರೈಸ್ ಕೊಡ್ತಾರಂತೆ ರಣ್ ವೀರ್.ಅಲ್ಲದೇ ಈ ವರ್ಷ ಅತ್ಯಂತ ಡಿಫರೆಂಟ್ ವಾಲೆಂಟೈನ್ಸ್ ಡೇಯನ್ನು ಆಚರಿಸಬೇಕು ಅಂತಾ ರಣ್ ವೀರ್ ಅಂದುಕೊಂಡಿದ್ದಾರೆ. ಇನ್ನು ದಿಪ್ಪಿ ಏನ್ ಪ್ಲಾನ್ ಮಾಡಿದ್ದಾರೋ ಗೊತ್ತಿಲ್ಲ.
 
  ಇನ್ನು ರಣ್ ವೀರ್ ದೀಪಿಕಾಗೆ ಸ್ಪೆಷಲ್ ಗಿಫ್ಟ್ ಒಂದನ್ನು ನೀಡಲಿದ್ದಾರಂತೆ.ಆದ್ರೆ ಏನ್ ಗಿಫ್ಟ್ ಅನ್ನೋದನ್ನು ರಣ್ ವೀರ್ ಎಲ್ಲೂ ಹೇಳಿಲ್ಲ. ಹಾಗಾಗಿ ರಣ್ ವೀರ್ ಹಾಗೂ ದೀಪಿಕಾ ಪಡುಕೋಣೆ ಯಾವ ರೀತಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.

Share this Story:

Follow Webdunia kannada