Select Your Language

Notifications

webdunia
webdunia
webdunia
webdunia

ದರ್ಶನ್ ಸ್ನೇಹಿತ ನಿರ್ಮಾಪಕ ಸೌಂದರ್ಯ ಜಗದೀಶ್ ಇನ್ನಿಲ್ಲ, ಸಾವಿನ ಹಿಂದೆ ಹಲವು ಶಂಕೆ

ದರ್ಶನ್ ಸ್ನೇಹಿತ ನಿರ್ಮಾಪಕ ಸೌಂದರ್ಯ ಜಗದೀಶ್ ಇನ್ನಿಲ್ಲ, ಸಾವಿನ ಹಿಂದೆ ಹಲವು ಶಂಕೆ

Sampriya

ಬೆಂಗಳೂರು , ಭಾನುವಾರ, 14 ಏಪ್ರಿಲ್ 2024 (13:35 IST)
Photo Courtesy Facebook
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್‌ಲೈನ್‌ ವೆಂಕಟೇಶ್ ಸೇರಿದಂತೆ ಸೆಲೆಬ್ರಿಟಿಗಳ ಜತೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್​ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಪ್ಪು ಪಪ್ಪು, ಸ್ನೇಹಿತರು ಮುಂತಾದ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಬೆಂಗಳೂರಿನಲ್ಲಿ ಜೆಟ್​ಲಾಗ್​ ಪಬ್​ ಹೊಂದಿದ್ದ ಜಗದೀಶ್​ ಅವರು ಬಿಲ್ಡರ್​ ಕೂಡ ಆಗಿದ್ದರು. ಇನ್ನೂ ನಾನಾ ಕಾರಣಗಳಿಗೆ  ವಿವಾದಕ್ಕೆ ಕಾರಣರಾಗಿದ್ದರು.  ಈಚೆಗೆ ಇವರ ಒಡೆತನದ ಜೆಟ್‌ಲಾಗ್ ಪಬ್‌ನಲ್ಲಿ 'ಕಾಟೇರ' ಚಿತ್ರತಂಡ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪವಾಗಿತ್ತು. ಅದರಲ್ಲಿ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅವರ ಸ್ನೇಹಿತರು ಭಾಗಿಯಾಗಿದ್ದರು.

ಆ ಬಳಿಕ 25 ದಿನಗಳ ಕಾಲ ರೆಸ್ಟೋ ಬಾರ್​ ಲೈಸೆನ್ಸ್​ ರದ್ದು ಮಾಡಲಾಗಿತ್ತು. ಮೂಲಗಳ ಪ್ರಕಾರ, ಕೆಲವೇ ದಿನಗಳ ಹಿಂದೆ ಬ್ಯಾಂಕ್​ನವರು ಸೌಂದರ್ಯ ಜಗದೀಶ್​ ಅವರ ಮನೆಯನ್ನು ಸೀಜ್​ ಮಾಡಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಯಾವ ಕಾರಣಕ್ಕಾಗಿ ಸೌಂದರ್ಯ ಜಗದೀಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ನೆರೆಹೊರೆಯವರ ಜೊತೆ ಅವರ ಕುಟುಂಬದವರು ಗಲಾಟೆ ಮಾಡಿಕೊಂಡಿದ್ದು ಕೂಡ ಭಾರಿ ವಿವಾದ ಸೃಷ್ಟಿಸಿತ್ತು.

ಇನ್ನು ಚಿತ್ರರಂಗಕ್ಕೆ ಪುತ್ರ ಸ್ನೇಹಿತ್‌ನನ್ನು ಪರಿಚಯಿಸಿದ್ದರು. ಹಲವು ಸಿನಿಮಾಗಳ ವಿತರಣೆಯನ್ನೂ ಅವರು ಮಾಡಿದ್ದರು. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ಜೊತೆ ಅವರು ಸ್ನೇಹ ಹೊಂದಿದ್ದರು. ಇತ್ತೀಚೆಗಷ್ಟೇ ಪ್ರಿಯಾಂಕಾ ಉಪೇಂದ್ರ ಅವರು ಆಯೋಜಿಸಿದ್ದ ಹೋಳಿ ಸಂಭ್ರಮದಲ್ಲಿ ಸೌಂದರ್ಯ ಜಗದೀಶ್​ ಭಾಗಿ ಆಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ, ತನಿಖೆ ಚುರುಕು