Select Your Language

Notifications

webdunia
webdunia
webdunia
webdunia

ಫಿಲ್ಮ್​ ಚೇಂಬರ್ ನ ನೂತನ ಅಧ್ಯಕ್ಷರಾಗಿ ಚಿನ್ನೇಗೌಡರು ಆಯ್ಕೆ

ಫಿಲ್ಮ್​ ಚೇಂಬರ್ ನ ನೂತನ ಅಧ್ಯಕ್ಷರಾಗಿ ಚಿನ್ನೇಗೌಡರು ಆಯ್ಕೆ
ಬೆಂಗಳೂರು , ಬುಧವಾರ, 27 ಜೂನ್ 2018 (08:13 IST)
ಬೆಂಗಳೂರು : ಜೂನ್ 26 ರಂದು ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಫಿಲ್ಮ್​ ಚೇಂಬರ್ ನ ನೂತನ ಅಧ್ಯಕ್ಷರಾಗಿ ಚಿನ್ನೇಗೌಡರು ಆಯ್ಕೆಯಾಗಿದ್ದಾರೆ.


ಚಿತ್ರ ವಿತರಕರ ವಲಯದಿಂದ ಚಿನ್ನೇಗೌಡ ಮತ್ತು ಮಾರ್ಕ್ಸ್ ಸುರೇಶ್ ಅವರು ಸ್ಪರ್ಧಿಸಿದ್ದು, 551 ಮತಗಳನ್ನು ಗಳಿಸಿ ಚಿನ್ನೇಗೌಡರು ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ.


ಇದೇ ವೇಳೆ ಉಪಾಧ್ಯಕ್ಷರಾಗಿ ನಿರ್ಮಾಪಕ ವಲಯದಿಂದ ಕರಿ ಸುಬ್ಬು ಅವರು ಆಯ್ಕೆಯಾಗಿದ್ದಾರೆ. ಕರಿ ಸುಬ್ಬು ಅವರು ಚುನಾವಣೆಯಲ್ಲಿ ಒಟ್ಟು 338 ಮತಗಳನ್ನು ಗಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಹಾಗೇ  ಗೌರವ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ನಿರ್ಮಾಪಕ ಬಾ.ಮಾ. ಹರೀಶ್ ಗೆಲುವು ಸಾಧಿಸಿದ್ದಾರೆ.  ಇನ್ನುಳಿದಂತೆ ವಿತರಕ ವಲಯದಲ್ಲಿ ಕೆ ಮಂಜು 274 ಮತಗಳಿಂದ ಜಯ ಸಾಧಿಸಿದ್ದಾರೆ. ಅಲ್ಲದೇ ಗೌರವ ಕಾರ್ಯದರ್ಶಿ ವಿತರಕ ವಲಯದಿಂದ ಶ್ರೀನಿವಾಸ್ ಮತ್ತು ಹೆಚ್.ಸಿ. ಶಿಲ್ಪಾ ಗೆಲುವು ದಾಖಲಿಸಿದ್ದಾರೆ. ಗೌರವ ಖಜಾಂಚಿಯಾಗಿ ವಿರೇಶ್ ಕೆ.ಎಂ. ಜಯ ಸಾಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರನ್ನು ಇಂಪ್ರೆಸ್ ಮಾಡಲು ಸಂಜಯ್ ದತ್ ಮಾಡುತ್ತಿದ್ದ ಪ್ಲ್ಯಾನ್ ಕೇಳಿದ್ರೆ ಶಾಕ್ ಆಗ್ತೀರಿ!