Select Your Language

Notifications

webdunia
webdunia
webdunia
webdunia

ಮತ್ತೇ ನಟನೆಗೆ ಮರಳಿದ ಬಾಲಿವುಡ್ ಬಬ್ಲಿ ಗರ್ಲ್‌ ಪ್ರೀತಿ ಜಿಂಟಾ

Prethi Zinta

Sampriya

ಮುಂಬೈ , ಗುರುವಾರ, 25 ಏಪ್ರಿಲ್ 2024 (15:59 IST)
Photo Courtesy X
ಪಂಜಾಬ್ ಐಪಿಎಲ್ ತಂಡದ ಮಾಲಕಿ ಪ್ರೀತಿ ಜಿಂಟಾ ಅವರು 7 ವರ್ಷಗಳ ಬಳಿಕ ಮತ್ತೇ ನಟನೆಗೆ ವಾಪಾಸ್ಸಾಗುತ್ತಿದ್ದಾರೆ.

1998ರಲ್ಲಿ ದಿಲ್ ಸೇ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರಿಗೆ ಫಿಲ್ಮ್‌ ಫೇರ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿದೆ. ಇವರು 2018ರಲ್ಲಿ 'ಭಯಾಜಿ ಸೂಪರ್‌ಹಿಟ್' ಸಿನಿಮಾ ನಂತರ ಬಣ್ಣದ ಬದುಕಿನಿಂದ ದೂರಾವಾಗಿದ್ದರು.  ಇದೀಗ 7 ವರ್ಷಗಳ ನಂತರ ಮತ್ತೇ ನಟನೆಗೆ ಮರುಳಿದ್ದಾರೆ.

ಸದ್ಯ 'ಲಾಹೋರ್ 1947' ಚಿತ್ರದಲ್ಲಿ ನಟಿಸೋಕೆ ಪ್ರೀತಿ ಜಿಂಟಾ ಒಪ್ಪಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ನೆರವೇರಿದ್ದು ಚಿತ್ರೀಕರಣ ಆರಂಭವಾಗಿದೆ. ಸನ್ನಿ ಡಿಯೋಲ್ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ರಾಜ್‌ಕುಮಾರ್ ಸಂತೋಷಿ ಆಕ್ಷನ್ ಕಟ್ ಹೇಳಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪ್ರೀತಿ ತೆರೆಮೇಲೆ ಮಿಂಚಿದ್ದಕ್ಕಿಂತ ಐಪಿಎಲ್ ಪಂದ್ಯಗಳ ವೇಳೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. 2016ರಲ್ಲಿ ಜೀನ್ ಗುಡೆನಫ್ ಕೈ ಹಿಡಿದ ಹಿಮಾಚಲ್ ಪ್ರದೇಶದ ಬ್ಯೂಟಿ ಬಳಿಕ ನಟಿಸಿದ್ದು ಕಮ್ಮಿ.ಡ ಆಕೆ ಮಿಂಚಿದ್ದಾರೆ. 'ಕ್ರಿಶ್', 'ರಬ್‌ದೆ ಬನಾದಿ ಜೋಡಿ', 'ಕಭಿ ಅಲ್ವಿದಾ ನಾ ಕೆಹನಾ', 'ಸಲಾಮ್ ನಮಸ್ತೆ', 'ಲಕ್ಷಾ', 'ಕೋಯಿ ಮಿಲ್‌ಗಯಾ' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೂ ಎನ್ ಟಿಆರ್ ಸಿನಿಮಾ ಬಳಿಕ ಪ್ರಶಾಂತ್ ನೀಲ್ ಕನ್ನಡಕ್ಕೆ ಬರ್ತಾರೆ ಎನ್ನುವುದೆಲ್ಲಾ ಬರೀ ಸುಳ್ಳು!