Select Your Language

Notifications

webdunia
webdunia
webdunia
webdunia

‘ಇಂಡಿಯಾ’ ಅಲ್ಲ ‘ಭಾರತ’ ಎನ್ನಿ! ಹೆಸರು ಬದಲಾವಣೆಗೆ ಅಮಿತಾಭ್, ಸೆಹ್ವಾಗ್, ಪವನ್ ಕಲ್ಯಾಣ್ ಬೆಂಬಲ

‘ಇಂಡಿಯಾ’ ಅಲ್ಲ ‘ಭಾರತ’ ಎನ್ನಿ! ಹೆಸರು ಬದಲಾವಣೆಗೆ ಅಮಿತಾಭ್, ಸೆಹ್ವಾಗ್, ಪವನ್ ಕಲ್ಯಾಣ್ ಬೆಂಬಲ
ನವದೆಹಲಿ , ಮಂಗಳವಾರ, 5 ಸೆಪ್ಟಂಬರ್ 2023 (16:44 IST)
ನವದೆಹಲಿ: ಇಂಡಿಯಾ ಎನ್ನುವ ಬ್ರಿಟಿಷರು ನೀಡಿದ ಹೆಸರನ್ನು ಕೈ ಬಿಟ್ಟು ಇನ್ನು ಮುಂದೆ ನಮ್ಮ ದೇಶದ ಹೆಸರನ್ನು ಭಾರತ ಎಂದೇ ಬದಲಾವಣೆ ಮಾಡಲು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಕೆಲವು ಸೆಲೆಬ್ರಿಟಿಗಳೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಭಾರತ ಎಂದು ಹೆಸರು ಬದಲಾಯಿಸುವ ಬಗ್ಗೆ ಚರ್ಚೆಗಳು ನಡೆದಿರುವ ಬೆನ್ನಲ್ಲೇ ಟ್ವೀಟ್ ಮಾಡಿರುವ ಬಿಗ್ ಬಿ ಅಮಿತಾಭ್ ಬಚ್ಚನ್ ‘ಜೈ ಭಾರತ’ ಎಂದಿದ್ದಾರೆ.

ಇನ್ನು ನಟ ಪವನ್ ಕಲ್ಯಾಣ್ ಕೂಡಾ ಭಾಷಣವೊಂದರಲ್ಲಿ ನಮಗೆ ಬ್ರಿಟಿಷರು ನೀಡಿದ ಇಂಡಿಯಾ ಹೆಸರು ಬೇಡ. ಭಾರತ ಎನ್ನೋಣ ಎಂದಿದ್ದಾರೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ವಿಶ್ವಕಪ್ ತಂಡದ ಬಗ್ಗೆ ಪ್ರತಿಕ್ರಿಯಿಸುತ್ತಾ ‘ನಾವು ಈ ಬಾರಿ ಇಂಡಿಯಾ ಅಲ್ಲ, ಭಾರತ ತಂಡಕ್ಕೆ ಚಿಯರ್ ಮಾಡೋಣ ಎಂದಿದ್ದಾರೆ.

ಆದರೆ ನಟ ವಿಷ್ಣು ವಿಶಾಲ್ ಹೆಸರು ಬದಲಾವಣೆಯಿಂದ ನಮ್ಮ ದೇಶ ಅಭಿವೃದ್ಧಿಯಾಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖುಷಿ ಸಿನಿಮಾ ಸಂಭಾವನೆಯನ್ನು ಬಡವರಿಗೆ ದಾನ ಮಾಡಲಿದ್ದಾರೆ ವಿಜಯ್ ದೇವರಕೊಂಡ