Select Your Language

Notifications

webdunia
webdunia
webdunia
webdunia

ರಿಯಯನ್ಸ್ ಜಿಯೋ ಉಚಿತ ಕೊಡುಗೆ ವಿರುದ್ಧ ದೂರು

ರಿಯಯನ್ಸ್ ಜಿಯೋ ಉಚಿತ ಕೊಡುಗೆ ವಿರುದ್ಧ ದೂರು
New Delhi , ಮಂಗಳವಾರ, 7 ಫೆಬ್ರವರಿ 2017 (10:16 IST)
‘ವೆಲ್ಕಮ್ ಆಫರ್’ ಮತ್ತು ‘ಹ್ಯಾಾಪಿ ನ್ಯೂ ಇಯರ್ ಆಫರ್’ ನಡುವಿನ ವ್ಯತ್ಯಾಸ ಕುರಿತು ರಿಲಯನ್ಸ್‌ ಜಿಯೋ ಗ್ರಾಹಕರಿಗೆ  ಮತ್ತು ಟ್ರಾಯ್‌ಗೆ ಸರಿಯಾದ ಮಾಹಿತಿ ನೀಡಿದೆಯೇ ಎಂದು ದೂರಸಂಪರ್ಕ ವ್ಯಾಜ್ಯ ಪರಿಹಾರ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಟಿಡಿಎಸ್‌ಎಟಿ) ಟ್ರಾಯನ್ನು ಪ್ರಶ್ನಿಸಿದೆ.
 
ಪ್ರಶ್ನೆಗೆ ಉತ್ತರಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ(ಟ್ರಾಯ್) ಫೆ. 15ರ ವರೆಗೆ ಕಾಲಾವಕಾಶ ನೀಡಲಾಗಿದೆ. ದೂರಸಂಪರ್ಕ ತೆರಿಗೆ ನಿಯಮ ಮತ್ತು ದೂರಸಂಪರ್ಕ ಗ್ರಾಹಕ ರಕ್ಷಣಾ ನಿಯಮವನ್ನು ರಿಲಯನ್ಸ್ ಜಿಯೋ ಸರಿಯಾಗಿ ಪಾಲಿಸುತ್ತಿದೆಯೇ ಎಂಬ ಬಗ್ಗೆಯೂ ಮಾಹಿತಿ ನೀಡುವಂತೆ ಟ್ರಾಯ್‌ಗೆ ಟಿಡಿಎಸ್‌ಎಟಿ ಸೂಚಿಸಿದೆ. ಫೆ. 20ಕ್ಕೆ ಮುಂದಿನ ವಿಚಾರಣೆಯನ್ನು ಟಿಡಿಎಸ್‌ಎಟಿ ನಿಗದಿಪಡಿಸಿದೆ.
 
ದೂರಸಂಪರ್ಕ ಕಂಪೆನಿಯು ಸೇವೆಯ ನಿಯಮವನ್ನು ಬದಲಿಸುವಾಗ ಗ್ರಾಹಕರಿಗೆ ಅದರ ಸಂಪೂರ್ಣ ಮಾಹಿತಿ ನೀಡುವುದು ಕಡ್ಡಾಯ. ಕಳೆದ ವಾರವಷ್ಟೆ, ಉಚಿತ ವಾಯ್ಸ್ ಕರೆ ಕುರಿತು ರಿಲಯನ್ಸ್ ಜಿಯೋಗೆ ಟ್ರಾಯ್ ಕ್ಲೀನ್ ಚಿಟ್ ನೀಡಿತ್ತು.
 
ರಿಲಯನ್ಸ್ ಜಿಯೋ ಪ್ರಾಾರಂಭವಾದಾಗಿನಿಂದ ಡಿ. 31ರ ವರೆಗೆ ‘ವೆಲ್ಕಮ್ ಆಫರ್’ ನೀಡಿತ್ತು. ಇದರಲ್ಲಿ ಗ್ರಾಾಹಕರು ಅನಿಯಮಿತ 4ಜಿ ಡಾಟಾ ಮತ್ತು ಉಚಿತ ವಾಯ್ಸ್ ಕರೆಗಳನ್ನು ನೀಡಲಾಗಿತ್ತು. ನಂತರ ಮಾರ್ಚ್ 31ರ ವರೆಗೆ ‘ಹ್ಯಾಪಿ ನ್ಯೂ ಇಯರ್’ ಹೆಸರಿನಲ್ಲಿ ವೆಲ್ಕಮ್ ಆಫರನ್ನು ಮುಂದುವರಿಸುವುದಾಗಿ ಜಿಯೋ ತಿಳಿಸಿತ್ತು. ಉಚಿತ ಆಫರ್‌ಗಳನ್ನು ಮುಂದುವರಿಸಲು ಜಿಯೋಗೆ ಅನುಮತಿ ನೀಡಬಾರದೆಂದು ಏರ್‌ಟೆಲ್ ಮತ್ತು ಐಡಿಯಾ ಸೆಲ್ಲೂಲರ್ ಟ್ರಾಯ್‌ಗೆ ಮನವಿ ಸಲ್ಲಿಸಿದ್ದವು. ಎರಡೂ ಆಫರ್‌ಗಳಿಗೂ ವ್ಯತ್ಯಾಸ ಇರುವುದರಿಂದ ಇದು ಅದರ ಮುಂದಿನ ಭಾಗವಾಗಲು ಸಾಧ್ಯವಿಲ್ಲ ಎಂದು ಟ್ರಾಯ್ ಹೇಳಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಟಾ ಸನ್ಸ್ ಮಂಡಳಿಯಿಂದ ಸೈರಸ್ ಮಿಸ್ತ್ರಿ ವಜಾ