ರಿಲಯನ್ಸ್ ಜಿಯೊ ತನ್ನ ಗ್ರಾಹಕರಿಗೆ ನೀಡಿದ ಮಾನ್ಸೂನ್ ಹಂಗಮಾ ಆಫರ್ ಇಂದು ಆರಂಭ

ಶನಿವಾರ, 21 ಜುಲೈ 2018 (07:15 IST)
ನವದೆಹಲಿ : ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ತನ್ನ ಜಿಯೊಫೋನ್ ಗ್ರಾಹಕರಿಗೆ ಮಾನ್ಸೂನ್ ಹಂಗಾಮ ಸ್ಕೀಮ್ ವೊಂದನ್ನು  ಆರಂಭಿಸುತ್ತಿದ್ದು, ಅದು ಇಂದಿನಿಂದ ಲಭ್ಯವಾಗಲಿದೆ.


ಈ ಜಿಯೊಫೋನ್ ಮಾನ್ಸೂನ್ ಹಂಗಮಾ ಆಫರ್ ಅಡಿಯಲ್ಲಿ, ಗ್ರಾಹಕರು ಯಾವುದೇ ಬ್ರಾಂಡ್ ನ ಹಳೆಯ ಫೀಚರ್ ಫೋನ್ ಗಳನ್ನು ರೂ. 501ಕ್ಕೆ ಬದಲಾಯಿಸಿ ಹೊಸ ಜಿಯೋಫೋನ್ ಪಡೆದುಕೊಳ್ಳುವ ಆಯ್ಕೆ ನೀಡಿದೆ. ಅಂದರೆ ಹಳೆಯ ಫೀಚರ್ ಫೋನ್ ಜೊತೆ ರೂ.501 ಪಾವತಿಸಿ ಹೊಸ ಜಿಯೋಫೋನ್2 ಖರೀದಿಸಬಹುದು.


ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ಈ ವಿಷಯ ಪ್ರಕಟಿಸಿದ್ದು ಇಂದಿನಿಂದ  ಗ್ರಾಹಕರಿಗೆ ಮಾನ್ಸೂನ್ ಹಂಗಾಮ ಆಫರ್ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ರಿಲಯನ್ಸ್ ಜಿಯೊ ಈ ಯೋಜನೆಯ ನಿಯಮ ಮತ್ತು ಷರತ್ತುಗಳನ್ನು ಇಂದು ಘೋಷಿಸಲಿದೆ. ಆಗಸ್ಟ್ 15ರ ನಂತರ ಈಗಿರುವ ಮತ್ತು ಹೊಸ ಜಿಯೊಫೋನ್ ಬಳಕೆದಾರರಿಗೆ ಫೇಸ್ ಬುಕ್, ವಾಟ್ಸಾಪ್ ಮತ್ತು ಯೂಟ್ಯೂಬ್ ಗಳು ಕೂಡ ಲಭ್ಯವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING