Select Your Language

Notifications

webdunia
webdunia
webdunia
webdunia

ಐರೋಪ್ಯ ಒಕ್ಕೂಟಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ

ಐರೋಪ್ಯ ಒಕ್ಕೂಟಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ
ಐರೋಪ್ಯ ರಾಷ್ಟ್ರಗಳಲ್ಲಿ ಶಾಂತಿ ಮತ್ತು ಪ್ರಜಾಪ್ರಭತ್ವ ಸ್ಥಾಪನೆಗೆ ಶ್ರಮಿಸಿದ `ಐರೋಪ್ಯ ಒಕ್ಕೂಟ`ಕ್ಕೆ ಈ ಬಾರಿಯ `ನೊಬೆಲ್ ಶಾಂತಿ ಪ್ರಶಸ್ತಿ` ಲಭ್ಯವಾಗಿದೆ. 1950ರಲ್ಲಿ ಅಸ್ತಿತ್ವಕ್ಕೆ ಬಂದ ಐರೋಪ್ಯ ಒಕ್ಕೂಟ, ಪ್ರಸ್ತುತ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ಶಾಂತಿ ಪ್ರಶಸ್ತಿ ದೊರಕಿರುವುದು ವಿಪರ್ಯಾಸ ಎನ್ನಲಾಗುತ್ತಿದೆ.

`ಐರೋಪ್ಯ ರಾಷ್ಟ್ರಗಳಲ್ಲಿ ಆರು ದಶಕಗಳ ಕಾಲ ಶಾಂತಿ, ಸಾಮರಸ್ಯ, ಪ್ರಜಾಪ್ರಭತ್ವ ಮತ್ತು ಮಾನವ ಹಕ್ಕುಗಳ ಸ್ಥಾಪನೆಗಾಗಿ ನಡೆಸಿದ ಹೋರಾಟವನ್ನು ಗುರುತಿಸಿ ಐರೋಪ್ಯ ರಾಷ್ಟ್ರಗಳ ಒಕ್ಕೂಟವನ್ನು ಈ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ` ಎಂದು ಆಯ್ಕೆ ಸಮಿತಿ ತಿಳಿಸಿದೆ.

`ಯುದ್ಧಪೀಡಿತ ಯೂರೋಪ್ ಅನ್ನು ಶಾಂತಿಯ ಖಂಡವಾಗಿ ಪರಿವರ್ತಿಸಲು ಒಕ್ಕೂಟ ಶ್ರಮಿಸಿದ್ದು, ಅದರ ಕಾರ್ಯವೈಖರಿಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ` ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಥೊರ್ಬೊಜರ್ನ್ ಜಗ್ಲೆಂಡ್ ತಿಳಿಸಿದ್ದಾರೆ.

Share this Story:

Follow Webdunia kannada