Select Your Language

Notifications

webdunia
webdunia
webdunia
webdunia

ಇರಾನ್ ಮೇಲೆ ದಾಳಿಗೆ ಅಮೆರಿಕ-ಇಸ್ರೇಲ್ ಸ್ಕೆಚ್?

ಇರಾನ್ ಮೇಲೆ ದಾಳಿಗೆ ಅಮೆರಿಕ-ಇಸ್ರೇಲ್ ಸ್ಕೆಚ್?
ಜೆರುಸಲೆಂ , ಬುಧವಾರ, 10 ಅಕ್ಟೋಬರ್ 2012 (16:26 IST)
PR
ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ 'ನಿಖರ ದಾಳಿ'ಯೊಂದನ್ನು ನಡೆಸುವ ಸಾಧ್ಯತೆ ಕುರಿತು ಅಮೆರಿಕ ಮತ್ತು ಇಸ್ರೇಲ್‌ ಅಂತಿಮ ಪರಾಮರ್ಶೆ ನಡೆಸುತ್ತಿವೆ. ಈ ದಾಳಿ ಒಂದೆರಡು ದಿನಗಳಲ್ಲಿ ಅಂತ್ಯಗೊಳ್ಳಬಹುದೆಂದು ಅಮೆರಿಕದ ತಜ್ಞರೊಬ್ಬರು ಹೇಳಿದ್ದಾರೆ.

ಅತ್ಯುತ್ತಮವಾಗಿ ನಡೆದಲ್ಲಿ ವೈಮಾನಿಕ ದಾಳಿಗೆ ಕೇವಲ ಎರಡು ತಾಸುಗಳು ತಗಲಬಹುದು ಮತ್ತು ಒಟ್ಟಾರೆ ಒಂದೆರಡು ದಿನಗಳಲ್ಲಿ ಕಾರ್ಯಾಚರಣೆ ಅಂತ್ಯಗೊಳ್ಳುವುದೆಂದು ಬಲ್ಲ ಮೂಲಗಳನ್ನು ಉದ್ಧರಿಸಿ ಡೇವಿಡ್‌ ರೋತ್‌ಕೋಫ್ ವಿದೇಶಾಂಗ ನೀತಿ ನಿಯತಕಾಲಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಹೇಳಿದ್ದಾರೆ.

ಇರಾನಿನ ಯುರೇನಿಯಂ ಸಂಸ್ಕರಣ ವ್ಯವಸ್ಥೆಗಳನ್ನು ಗುರಿಯಾಗಿಸಿ ಅಮೆರಿಕ-ಇಸ್ರೇಲ್‌ ನಿಖರ ಜಂಟಿ ದಾಳಿ ನಡೆಸಲಿವೆ. ಈ ಕಾರ್ಯಾಚರಣೆಗೆ ಬಾಂಬರ್‌ಗಳು ಹಾಗೂ ಡ್ರೋನ್‌ಗಳನ್ನು ಬಳಸಲಾಗುವುದು. ಕಾರ್ಯಾಚರಣೆ ಟೆಹರಾನ್‌ನ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ಗಣನೀಯ ಹಿನ್ನಡೆ ಉಂಟುಮಾಡಲಿದೆ ಮಾತ್ರವಲ್ಲ ಅಮೆರಿಕದಲ್ಲಿ ರಾಜಕೀಯ ಸಮೀಕರಣಗಳ ಬದಲಾವಣೆಗೆ ಕಾರಣವಾಗಲಿದೆಯೆಂದು ಈ ನೀತಿಯ ಸಮರ್ಥಕರು ಪ್ರತಿಪಾದಿಸುತ್ತಿರುವುದಾಗಿ ರೋತ್‌ಕೋಫ್ ಹೇಳಿದ್ದಾರೆ.

Share this Story:

Follow Webdunia kannada