Select Your Language

Notifications

webdunia
webdunia
webdunia
webdunia

ವಿಶ್ವದ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಯಾವ ಸ್ಥಾನ

Corruption

Krishnaveni K

ನವದೆಹಲಿ , ಬುಧವಾರ, 31 ಜನವರಿ 2024 (11:00 IST)
ನವದೆಹಲಿ: ವಿಶ್ವದ ಭ್ರಷ್ಟಾಷಾರ ಗ್ರಹಿಕೆ ಸೂಚ್ಯಂಕ ಪಟ್ಟಿ ಬಿಡುಗಡೆಯಾಗಿದ್ದು 180 ದೇಶಗಳ ಪಟ್ಟಿಯಲ್ಲಿ ಭಾರತ 93 ನೇ ಸ್ಥಾನದಲ್ಲಿದೆ.

2023 ರ ಜಗತ್ತಿನ ಭ್ರಷ್ಟ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿ ನೋಡಿದರೆ ಭ್ರಷ್ಟಾಷಾರದ ವಿರುದ್ಧ ಕೈಗೊಳ್ಳುವ ಯಾವ ಕ್ರಮಗಳೂ ಪರಿಣಾಮ ಬೀರುವಂತೆ ಕಾಣುತ್ತಿಲ್ಲ. ಪಟ್ಟಿಯಲ್ಲಿರುವ ಮೂರನೇ ಎರಡು ರಾಷ್ಟ್ರಗಳು 50 ಕ್ಕಿಂತ ಕಡಿಮೆ ಅಂಕ ಪಡೆದಿದೆ. ಪಟ್ಟಿಯಲ್ಲಿ ಸತತವಾಗಿ ಎರಡನೇ ಬಾರಿಗೆ ಅಗ್ರ ಸ್ಥಾನ ಪಡೆದಿರುವ ಡೆನ್ಮಾರ್ಕ್ ಕಡಿಮೆ ಭ್ರಷ್ಟಾಚಾರವಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವುದು ಸೊಮಾಲಿಯಾ ದೇಶ. ಈ ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಅಂಕಪಟ್ಟಿ ತೋರಿಸುತ್ತದೆ. ಭಾರತ  ಅಗ್ರ 100 ರೊಳಗೆ ಸ್ಥಾನ ಪಡೆದಿರುವುದು ಕೊಂಚ ಮಟ್ಟಿಗೆ ಸಮಾಧಾನಕರ. 12 ದೇಶಗಳ ಸಿಪಿಐ ಸ್ಕೋರ್ ನಿರಂತರವಾಗಿ ಕಡಿಮೆಯಾಗುತ್ತಾ ಬಂದಿದೆ. ಈ ಪಟ್ಟಿಯಲ್ಲಿ ಶ್ರೀಲಂಕಾ,  ವೆನೆಜುವಾಲ, ಮ್ಯಾನ್ಮಾರ್ ನಂತಹ ಕಡಿಮೆ ಆದಾಯವಿರುವ ರಾಷ್ಟ್ರಗಳಿವೆ. 8 ದೇಶಗಳ ಸಿಪಿಐ ಸ್ಕೋರ್ ಸುಧಾರಿಸಿದ್ದು, ಆ ಪೈಕಿ ಐರ್ಲೆಂಡ್, ದ.ಕೊರಿಯಾ, ವಿಯೆಟ್ನಾಂನಂತಹ ರಾಷ್ಟ್ರಗಳು ಸೇರಿವೆ.

ಭಾರತಕ್ಕೆ 93 ನೇ ಸ್ಥಾನ
ಪಟ್ಟಿಯಲ್ಲಿ ಭಾರತ 93 ನೇ ಸ್ಥಾನದಲ್ಲಿದೆ. ಭಾರತ 39 ಸಿಪಿಐ ಅಂಕಗಳನ್ನು ಪಡೆದುಕೊಂಡಿದೆ. ಪಾಕಿಸ್ತಾನ 29 ಅಂಕಗಳನ್ನು ಪಡೆದುಕೊಂಡು 133 ನೇ ಸ್ಥಾನದಲ್ಲಿದೆ. ಇನ್ನೊಂದು ನೆರೆಯ ರಾಷ್ಟ್ರ ಚೀನಾ 76 ಅಂಕಗಳೊಂದಿಗೆ 42 ನೇ ಸ್ಥಾನದಲ್ಲಿದೆ. ಹಾಗಿದ್ದರೂ ಇದಕ್ಕಿಂದ ಮೊದಲ ವರ್ಷಕ್ಕೆ ಹೋಲಿಸಿದರೆ ಮೂರರಷ್ಟು ಅಂಕ ಕಳೆದುಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನ ಷೇರು ಮಾರುಕಟ್ಟೆ: ಹೂಡಿಕೆ ಮಾಡಲು ಯಾವುದು ಸೂಕ್ತ ತಿಳಿಯಿರಿ