Select Your Language

Notifications

webdunia
webdunia
webdunia
webdunia

ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಗೆ ಲಾಲೂ ಪ್ರಸಾದ್ ಯಾದವ್ ಸಲಹೆಗಾರರಂತೆ!

ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಗೆ ಲಾಲೂ ಪ್ರಸಾದ್ ಯಾದವ್ ಸಲಹೆಗಾರರಂತೆ!
ಇಸ್ಲಾಮಾಬಾದ್ , ಸೋಮವಾರ, 20 ಆಗಸ್ಟ್ 2018 (11:03 IST)
ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಮಾಜಿ ಕ್ರಿಕೆಟಿಗ, ಪಿಟಿಐ ನಾಯಕ ಇಮ್ರಾನ್ ಖಾನ್ ಗೆ ಭಾರತದ ಆರ್ ಜೆಡಿ ಪಕ್ಷದ ನಾಯಕ ಲಾಲೂ ಪ್ರಸಾದ್ ಯಾದವ್ ಸಲಹೆಗಾರರಂತೆ!

ಹಾಗಂತ ಹೇಳಿರುವುದು ಪಾಕ್ ವಿರೋಧ ಪಕ್ಷದ ನಾಯಕ ಸೈಯದ್ ಖುರ್ಷಿದ್ ಶಾ ಟೀಕೆ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತು ಸದ್ಯಕ್ಕೆ ರಾಂಚಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಲಾಲೂ ಯಾದವ್ ಗೆ ಇಮ್ರಾನ್ ಖಾನ್ ರನ್ನು ಸೈಯದ್ ಹೋಲಿಕೆ ಮಾಡಿ ಲೇವಡಿ ಮಾಡಿದ್ದಾರೆ.

ಪಾಕ್ ಪ್ರಧಾನಿಯಾದ ಬಳಿಕ ಇಮ್ರಾನ್ ಖಾನ್ ಮೊದಲ ಬಾರಿಗೆ ಪಾಕ್ ಸಂಸತ್ತಿನಲ್ಲಿ ಮಾತನಾಡುವಾಗ ಗದ್ದಲ ಮಾಡುತ್ತಿದ್ದ ವಿಪಕ್ಷಗಳ ವಿರುದ್ಧ ತಾಳ್ಮೆ ಕಳೆದುಕೊಂಡು ಕೂಗಾಡಿದ್ದರು. ಇದೇ ಕಾರಣಕ್ಕೆ ಪಿಪಿಪಿ ನಾಯಕ ಸೈಯದ್ ಖುರ್ಷಿದ್ ಭಾರತೀಯ ರಾಜಕೀಯ ನಾಯಕನಿಗೆ ಇಮ್ರಾನ್ ಖಾನ್ ರನ್ನು ಹೋಲಿಕೆ ಮಾಡಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುಮಾರಸ್ವಾಮಿಗೆ ಕರೆ ಮಾಡಿದ ಪ್ರಧಾನಿ ಮೋದಿ