Select Your Language

Notifications

webdunia
webdunia
webdunia
webdunia

ಮುಟ್ಟಿನ ಸಮಯದಲ್ಲಿ ಪ್ಯಾಡ್ ಬದಲು ಟ್ಯಾಂಪನ್ ಬಳಸಿ ಕಾಲನ್ನೆ ಕಳೆದುಕೊಂಡ ಮಾಡೆಲ್

ಮುಟ್ಟಿನ ಸಮಯದಲ್ಲಿ ಪ್ಯಾಡ್ ಬದಲು ಟ್ಯಾಂಪನ್ ಬಳಸಿ ಕಾಲನ್ನೆ ಕಳೆದುಕೊಂಡ ಮಾಡೆಲ್
ನ್ಯೂಯಾರ್ಕ್ , ಮಂಗಳವಾರ, 13 ನವೆಂಬರ್ 2018 (11:53 IST)
ನ್ಯೂಯಾರ್ಕ್ : ಮುಟ್ಟಿನ ಸಮಯದಲ್ಲಿ ಪ್ಯಾಡ್ ಬಳಸುವ ಬದಲು ಟ್ಯಾಂಪನ್ ಬಳಸಿ ಮಾಡೆಲ್ ಒಬ್ಬಳು ತನ್ನ ಕಾಲನ್ನು ಕಳೆದುಕೊಂಡಿದ್ದಾಳೆ.


ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಪ್ಯಾಡ್ ಬಳಸುವ ಬದಲು ಟ್ಯಾಂಪನ್  ನ್ನು ಬಳಸುತ್ತಾರೆ. ಆದರೆ ಅದು ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದಕ್ಕೆ ಲಾರೆನ್ ವೈಸರ್ ಹೆಸರಿನ ಮಾಡೆಲ್  ಒಂದು ಉತ್ತಮ ಉದಾಹರಣೆ.


ಈಕೆ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿದ್ದು, ಒಮ್ಮೆ ಈಕೆ ಕೆಲಸದ ಒತ್ತಡದಿಂದ ಬೆಳಿಗ್ಗೆ ಹಾಕಿದ್ದ ಟ್ಯಾಂಪನ್ ತೆಗೆಯದೆ 8 ಗಂಟೆಗೂ ಹೆಚ್ಚು ಕಾಲ ಅದನ್ನು ಬಳಸಿದ್ದಳಂತೆ. ಇದು ಗ್ಯಾಂಗ್ರೀನ್ ರೀತಿಯ ಸಮಸ್ಯೆಗೆ ಕಾರಣವಾಗಿ ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಕಾಲನ್ನೆ ತೆಗೆದಿದ್ದಾರಂತೆ. ಈ ಘಟನೆ 2012ರಲ್ಲಿ ನಡೆದಿದ್ದು, ಇದೀಗ ಕಾಲು ಕಳೆದುಕೊಂಡ ಲಾರೆನ್ ತನ್ನ ಕಥೆಯನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಯ ಸಂತಸದಲ್ಲಿರುವ ವಾಹನ ಸವಾರರಿಗೆ ಒಂದು ಶಾಕಿಂಗ್ ನ್ಯೂಸ್