Select Your Language

Notifications

webdunia
webdunia
webdunia
webdunia

ನಮ್ಮ ನದಿ, ನಮ್ಮ ಹಕ್ಕು: ಇನ್ಮುಂದೆ ಪಾಕಿಸ್ತಾನಕ್ಕೆ ಹೋಗಲ್ಲ ನಮ್ಮ ರಾವಿ ನದಿ ನೀರು

Shahpur

Krishnaveni K

ಶ್ರೀನಗರ , ಮಂಗಳವಾರ, 27 ಫೆಬ್ರವರಿ 2024 (09:47 IST)
ಶ್ರೀನಗರ: ಇಷ್ಟು ದಿನ ನಮ್ಮ ದೇಶದಿಂದ ಹರಿದುಹೋಗುತ್ತಿದ್ದ ನದಿ ನೀರನ್ನೇ ಬಳಸಿ ನಮಗೇ ದ್ರೋಹ ಬಗೆಯುತ್ತಿದ್ದ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುವ ಸಮಯ ಬಂದಿದೆ.

ಪಂಜಾಬ್ ನ ಶಹಪುರ ಅಣೆಕಟ್ಟು ನಿರ್ಮಾಣ ಕಾರ್ಯ ಪೂರ್ತಿಗೊಂಡಿದ್ದು, ಇನ್ನು ಪಾಕಿಸ್ತಾನಕ್ಕೆ ಹರಿಯುತ್ತಿದ್ದ ರಾವಿ ನದಿ ನೀರು ಬಂದ್ ಆಗಲಿದೆ. ಇದು ಇನ್ನು ಭಾರತದಲ್ಲೇ ಉಳಿಯಲಿದೆ. ಕಳೆದ 45 ವರ್ಷಗಳಿಂದ ಪಾಕಿಸ್ತಾನಕ್ಕೆ ವೃಥಾ ಹರಿದು ಹೋಗುತ್ತಿದ್ದ ನೀರು ಬಂದ್ ಆಗಲಿದ್ದು, ಜಮ್ಮು ಕಾಶ್ಮೀರದ ಕೃಷಿ ಕಾರ್ಯಗಳಿಗೆ ಬಳಕೆಯಾಗಲಿದೆ.

ವಿಶ್ವಸಂಸ್ಥೆ ಮಧ‍್ಯಸ್ಥಿಕೆಯಲ್ಲಿ 1960 ರಲ್ಲಿ ಭಾರತ-ಪಾಕಿಸ್ತಾನ ನಡುವೆ ಒಪ್ಪಂದವೊಂದು ನಡೆದಿತ್ತು. ಅದರಂತೆ ರಾವಿ, ಸಟ್ಲೆಜ್, ಬಿಯಾಸ್ ನದಿಗಳ ಮೇಲೆ ಭಾರತಕ್ಕೆ ಸಂಪೂರ್ಣ ನಿಯಂತ್ರಣವಿರಲಿದೆ. ಅದರಂತೆ ಪಾಕಿಸ್ತಾನಕ್ಕೆ ಅನಗತ್ಯವಾಗಿ ಹರಿದುಹೋಗುತ್ತಿದ್ದ ರಾವಿ ನದಿ ನೀರನ್ನು ತಡೆಯಲು ಪಂಜಾಬ್ ನಲ್ಲಿ ಶಹಪುರ ಕಂಡಿ, ಪಂಜಾಬ್-ಜಮ್ಮು ಕಾಶ್ಮೀರ ಗಡಿ ಭಾಗದಲ್ಲಿ ರಣಜಿತ್ ಸಾಗರ್ ಅಣೆಕಟ್ಟು ನಿರ್ಮಾಣ ಮಾಡಲು ಮುಂದಾಗಿತ್ತು. 1995 ರಲ್ಲಿ ಅಣೆಕಟ್ಟು ನಿರ್ಮಾಣ ಕಾರ್ಯ ಆರಂಭವಾಗಿತ್ತು. ಅದೀಗ ಬರೋಬ್ಬರಿ 29 ವರ್ಷಗಳ ಬಳಿಕ ಪೂರ್ಣಗೊಂಡಿದೆ.

ಈ ಅಣೆಕಟ್ಟು ನಿರ್ಮಾಣದಿಂದಾಗಿ ಪಾಕಿಸ್ತಾನಕ್ಕೆ ಅನಗತ್ಯವಾಗಿ ಹರಿಯುತ್ತಿದ್ದ ನೀರು ತಡೆದು ಇನ್ನು ಮುಂದೆ ಅದರ ಸಂಪೂರ್ಣ ಉಪಯೋಗ ಭಾರತಕ್ಕೇ ಸಿಗುವಂತಾಗಲಿದೆ. ಅಲ್ಲದೆ, ಈ ನೀರು ಕಾಶ‍್ಮೀರದ ಸುಮಾರು 32000 ಹೆಕ್ಟೇರ್ ಪ್ರದೇಶಗಳ ಕೃಷಿ ಚಟುವಟಕೆಗಳಿಗೆ ಬಳಕೆಯಾಗಲಿದೆ. ಅದೂ ಅಲ್ಲದೆ, ಈ ಅಣೆಕಟ್ಟಿನಿಂದ 206 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಉತ್ಪಾದನೆಯ ಗುರಿಯೂ ಹಾಕಿಕೊಳ್ಳಲಾಗಿದೆ. ಕಳೆದ 45 ವರ್ಷಗಳಿಂದ ರಾವಿ ನದಿಯಿಂದ ಪಾಕಿಸ್ತಾನಕ್ಕೆ 1150 ಕ್ಯೂಸೆಕ್ಸ್ ನೀರು ಹರಿದುಹೋಗುತ್ತಿತ್ತು. ಅದೀಗ ಬಂದ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಸಭೆ ಚುನಾವಣೆ ಇಂದು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆ ಪ್ರತಿಷ್ಠೆಯ ಪ್ರಶ್ನೆ