Select Your Language

Notifications

webdunia
webdunia
webdunia
webdunia

ಅಪ್ಪುಗೆಯ ದಿನ: ಬೆಚ್ಚನೆಯ ಅಪ್ಪುಗೆಯಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

Hug day

Krishnaveni K

ಬೆಂಗಳೂರು , ಸೋಮವಾರ, 12 ಫೆಬ್ರವರಿ 2024 (08:24 IST)
ಬೆಂಗಳೂರು: ವಾಲಂಟೈನ್ಸ್‍ ವೀಕ್ ನಲ್ಲಿ ಇಂದು ಅಪ್ಪಗೆಯ ದಿನವಾಗಿದೆ. ವಾಲಂಟೈನ್ಸ್ ಡೇ ಆಚರಿಸಲು ಇನ್ನು ನಾಲ್ಕು ದಿನ ಬಾಕಿಯಿದ್ದು, ಇಂದು ಅಪ್ಪುಗೆಯ ದಿನವೆಂದು ಆಚರಣೆ ಮಾಡಲಾಗುತ್ತದೆ.

ನಮ್ಮ ಪ್ರೀತಿ ಪಾತ್ರರಿಗೆ ನೀಡುವ ಬೆಚ್ಚನೆ ಎಷ್ಟು ಸುಮಧುರ ಭಾವನೆ ಕೊಡುತ್ತದೆ ಅಲ್ವಾ? ಅಪ್ಪುಗೆ ಎನ್ನುವುದು ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಲು ಮತ್ತು ಪ್ರೀತಿ ವಿನಿಮಯ ಮಾಡಿಕೊಳ್ಳಲು ಹಾಗೂ ಸದ್ದಿಲ್ಲದೇ ಪ್ರೀತಿಯ ಸಂವಹನ ನಡೆಸಲು ಇರುವ ಒಂದು ಮಾರ್ಗವಾಗಿದೆ.

ಪ್ರೀತಿಯಲ್ಲಿ ಅಪ್ಪುಗೆ ಯಾಕೆ ಬೇಕು
ಕೆಲವೊಮ್ಮೆ ನಮ್ಮ ಭಾವನೆಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಾಗದೇ ಇರಬಹುದು. ಭಾವುಕತೆ ಮೇರೆ ಮೀರಿದಾಗ ಬೆಚ್ಚನೆಯ ಅಪ್ಪುಗೆಯೊಂದು ನಮ್ಮೆಲ್ಲಾ ಮನದ ಭಾವನೆಗಳನ್ನು ಸಂಗಾತಿಗೆ ದಾಟಿಸಿ ಬಿಡುವ ಶಕ್ತಿ ಹೊಂದಿದೆ. ಒಂದು ಬೆಚ್ಚನೆಯ ಅಪ್ಪುಗೆಯಿಂದ ಆತಂಕ, ಒತ್ತಡ ಮುಂತಾದವುಗಳನ್ನು ಕಡಿಮೆ ಮಾಡುವಂತಹ ಆಕ್ಸಿಟಾಸಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ.

ಮಾನಸಿಕವಾಗಿ ತೀರಾ ಕುಗ್ಗಿ ಹೋದಾಗ ಸಂಗಾತಿಯ ಹೆಗಲಿಗೊರಗಿದಾಗ ಸಿಗುವ ಅಪ್ಪುಗೆ ನಮಗೆ ಸಮಾಧಾನ ತಂದುಕೊಡುತ್ತದೆ. ಎಷ್ಟೋ ಸಮಯದ ನಂತರ ಭೇಟಿಯಾಗುವ ಸ್ನೇಹಿತನಿಗೆ ಸ್ನೇಹದ ಅಪ್ಪುಗೆ ನೀಡುತ್ತೇವೆ. ಪ್ರೇಮದ ಉತ್ತುಂಗದಲ್ಲಿ ಪ್ರೇಮಿಗೆ ನೀಡುವುದು ಬಿಗಿಯಾದ ಅಪ್ಪುಗೆ. ಈ ರೀತಿ ಅಪ್ಪುಗೆಯ ವಿಧಗಳು ಬೇರೆ ಬೇರೆಯಾಗಿದ್ದರೂ ಅವು ನಮ್ಮ ಮನಸ್ಸಿಗೆ ತಲುಪಿಸುವ ಭಾವನೆ ಸ್ನೇಹ, ಪ್ರೀತಿ ಮಾತ್ರವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮಂಗನ ಕಾಯಿಲೆ ಆತಂಕ!