Select Your Language

Notifications

webdunia
webdunia
webdunia
webdunia

ಹಮಾಸ್ ಉಗ್ರರಿಗೆ ಕಾಫಿ ಕೊಟ್ಟು ಯಾಮಾರಿಸಿದ ಇಸ್ರೇಲಿ ಮಹಿಳೆ!

Israel war
ನವದೆಹಲಿ , ಶುಕ್ರವಾರ, 20 ಅಕ್ಟೋಬರ್ 2023 (09:53 IST)
ನವದೆಹಲಿ: ಇಸ್ರೇಲ್ ಮತ್ತು ಹಮಾಸ್ಉಗ್ರರ ನಡುವೆ ನಡೆಯುತ್ತಿರುವ ಕದನದಲ್ಲಿ ರೋಚಕ ಘಟನೆಯೊಂದು ಈಗ ವೈರಲ್ ಆಗಿದೆ.

ಇಸ್ರೇಲಿ ಮಹಿಳೆಯೊಬ್ಬರು ತಮ್ಮ ಮನೆಗೆ ನುಗ್ಗಿದ್ದ ಉಗ್ರರಿಗೆ ಕಾಫಿ, ಕುಕ್ಕೀಸ್ ನೀಡಿ ಯಾಮಾರಿಸಿ 20 ಗಂಟೆಗಳ ಕಾಲ ಮನೆಯೊಳಗೇ ಇರಿಸಿ ಪೊಲೀಸರಿಗೆ ಹಿಡಿದುಕೊಡಲು ಸಹಾಯ ಮಾಡಿದ ಘಟನೆ ಸುದ್ದಿಯಾಗುತ್ತಿದೆ.

ರಾಚೆಲ್ ಎಂಬ ಈ ಮಹಿಳೆಯನ್ನು ಉಗ್ರರು ಗ್ರೆನೇಡ್, ರೈಫಲ್ ತೋರಿಸಿ ಬೆದರಿಸಿದ್ದರು. ಆದರೆ ಮಹಿಳೆ ತನ್ನ ಬುದ್ಧಿವಂತಿಕೆಯಿಂದ ಉಗ್ರರನ್ನೇ ಯಾಮಾರಿಸಿದ್ದಾಳೆ. ಉಗ್ರರು ಹಸಿದಿದ್ದರೆ ಕೋಪಗೊಳ್ಳಬಹುದೆಂದು ತಾನೇ ಅಡುಗೆ ಮಾಡಿ ಕೊಟ್ಟಿದ್ದಳಂತೆ! ಆಕೆಯ ರೋಚಕ ಕತೆಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷದಲ್ಲಿ ಹಲವು ಬದಲಾವಣೆಯಾಗಬೇಕು- ಮಾಜಿ ಸಿಎಂ ಕುಮಾರಸ್ವಾಮಿ