Select Your Language

Notifications

webdunia
webdunia
webdunia
webdunia

ನ್ಯೂ ಇಯರ್ ಗೆ ವಿದೇಶ ಪ್ರವಾಸ ಮಾಡಬೇಕಾ? ಹಾಗಿದ್ದರೆ 1 ಲಕ್ಷದಲ್ಲಿ ಈ ದೇಶಕ್ಕೆ ಹೋಗಬಹುದು!

ನ್ಯೂ ಇಯರ್ ಗೆ ವಿದೇಶ ಪ್ರವಾಸ ಮಾಡಬೇಕಾ? ಹಾಗಿದ್ದರೆ 1 ಲಕ್ಷದಲ್ಲಿ ಈ ದೇಶಕ್ಕೆ ಹೋಗಬಹುದು!
ನವದೆಹಲಿ , ಸೋಮವಾರ, 25 ಡಿಸೆಂಬರ್ 2023 (11:20 IST)
ನವದೆಹಲಿ: ಇನ್ನೇನು 2023 ಮುಗಿಯುತ್ತಾ ಬಂದಿದ್ದು 2024 ರ ಸ್ವಾಗತಕ್ಕೆ ಜನ ಸಜ್ಜಾಗಿದ್ದಾರೆ. ವರ್ಷಾಂತ್ಯದಲ್ಲಿ ಪ್ರವಾಸ ಮಾಡುವ ಯೋಜನೆಯಿದ್ದರೆ ನಿಮಗೆ ಇಲ್ಲಿದೆ ಬಂಪರ್ ಆಫರ್.

ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡಬೇಕು ಎಂದಾದರೆ ನಿಮಗೆ ಅನುಕೂಲಕರವಾಗಬಹುದಾದ ತಾಣವೆಂದರೆ ಶ್ರೀಲಂಕಾ. ನಮ್ಮ ನೆರೆಯ ರಾಷ್ಟ್ರಕ್ಕೆ 1 ಲಕ್ಷ ಬಜೆಟ್ ಇಟ್ಟುಕೊಂಡು ಪ್ರವಾಸ ಮಾಡಬಹುದು.

ಭಾರತೀಯರಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಬಹುದಾದ ವಿದೇಶೀ ತಾಣಗಳಲ್ಲಿ ಶ್ರೀಲಂಕಾ ಕೂಡಾ ಒಂದು. ರಾಮಾಯಣ ಕಾಲದ ಇತಿಹಾಸ ಹೇಳುವ ಅನೇಕ ಕುರುಹುಗಳು ಇಂದಿಗೂ ಲಂಕಾದಲ್ಲಿದೆ. ಹೀಗಾಗಿ ಲಂಕಾ ಪ್ರವಾಸ ಭಾರತೀಯರಿಗೂ ಅಚ್ಚುಮೆಚ್ಚು.

ಸುಮಾರು 1 ಲಕ್ಷ ರೂ. ಬಜೆಟ್ ನಲ್ಲಿ ಶ್ರೀಲಂಕಾ ಟೂರ್ ಪ್ಯಾಕೇಜ್ ನೀಡುವ ಏಜೆನ್ಸಿಗಳು ಸಾಕಷ್ಟಿವೆ. ಹೀಗಾಗಿ ಬೀಚ್, ಪ್ರಕೃತಿ ಸೌಂದರ್ಯ, ಒಳ್ಳೆಯ ಆಹಾರ ಜೊತೆಗೆ ಕಣ್ಮನ ತಣಿಸುವ ಪ್ರವಾಸೀ ತಾಣಗಳಿಗೆ ಸುತ್ತಾಡಬೇಕು ಎಂದಾದರೆ ಲಂಕಾ ಪ್ರವಾಸ ಮಾಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಸ್ ಮಸ್ ಹಬ್ಬಕ್ಕೆ ಶುಭ ಕೋರಿದ ಪ್ರಧಾನಿ ಮೋದಿ