Select Your Language

Notifications

webdunia
webdunia
webdunia
webdunia

9/11 ದಾಳಿ; 600 ಕೋಟಿ ಡಾಲರ್ ಪರಿಹಾರ ನೀಡಲು ಆದೇಶ

9/11 ದಾಳಿ; 600 ಕೋಟಿ ಡಾಲರ್ ಪರಿಹಾರ ನೀಡಲು ಆದೇಶ
ನ್ಯೂಯಾರ್ಕ್ , ಶುಕ್ರವಾರ, 5 ಅಕ್ಟೋಬರ್ 2012 (10:52 IST)
PR
ಅಮೆರಿಕದಲ್ಲಿ 2001ರ ಸೆಪ್ಟೆಂಬರ್ 11ರಂದು ನಡೆದ ದಾಳಿಯಿಂದ ಸಂತ್ರಸ್ತರಾದವರಿಗೆ ಆರು ನೂರು ಕೋಟಿ ಡಾಲರ್ ಪರಿಹಾರ ನೀಡುವಂತೆ ಇಲ್ಲಿನ ಜಿಲ್ಲಾ ನ್ಯಾಯಾಲಯವು ಇರಾನ್, ಅಲ್ ಖೈದಾ ಮತ್ತಿತರ ಆರೋಪಿಗಳಿಗೆ ಆದೇಶಿಸಿದೆ.

ದಾಳಿಯಿಂದ ಉಂಟಾದ ಆರ್ಥಿಕ ನಷ್ಟ, ನಾಗರಿಕರ ಹಾನಿಗೆ 600 ಕೋಟಿ ಡಾಲರ್ ಮೊತ್ತವನ್ನು ಕೋರ್ಟ್ ದಂಡನೆಯಾಗಿ ವಿಧಿಸಿದ್ದು, ಈ ಬೃಹತ್ ಮೊತ್ತವನ್ನು ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ನೀಡಲು ಸೂಚಿಸಿದೆ. ಆದರೆ, ಈ ಪರಿಹಾರ ಮೊತ್ತ ಸಂಗ್ರಹದ ಸಾಧ್ಯತೆ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ.

9/11 ದಾಳಿಗೆ ಬಲಿಯಾದವರಲ್ಲಿ 47 ಜನರ ಕುಟುಂಬಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಲಯವು ಬುಧವಾರ ಈ ಆದೇಶ ನೀಡಿದೆ. ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡ ಮತ್ತು ವಾಷಿಂಗ್ಟನ್ ಡಿಸಿಯಲ್ಲಿನ ಪೆಂಟಗಾನ್ ಕಟ್ಟಡಗಳ ಮೇಲೆ ಉಗ್ರರು ನಡೆಸಿದ ವೈಮಾನಿಕ ದಾಳಿಯಲ್ಲಿ ಮೂರು ಸಾವಿರ ಮಂದಿ ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ.

ಈ ದಾಳಿಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಇರಾನ್ ಪ್ರತಿಪಾದಿಸುತ್ತಲೇ ಬಂದಿದ್ದರೂ, ಆ ರಾಷ್ಟ್ರದ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.

Share this Story:

Follow Webdunia kannada