Select Your Language

Notifications

webdunia
webdunia
webdunia
webdunia

ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ನಟ ಯಾರು ಗೊತ್ತಾ

ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ನಟ ಯಾರು ಗೊತ್ತಾ
ಅಮೇರಿಕಾ , ಶನಿವಾರ, 25 ಆಗಸ್ಟ್ 2018 (14:09 IST)
ಅಮೇರಿಕಾ : ಫೋರ್ಬ್ಸ್ 2018ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹಾಲಿವುಡ್ ಸ್ಟಾರ್ ನಟರೊಬ್ಬರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.


ಫೋರ್ಬ್ಸ್ 2018ರ ಪ್ರಕಟಣೆಯಲ್ಲಿ ಹಾಲಿವುಡ್ ಸೂಪರ್ ಸ್ಟಾರ್ ‘ಜಾರ್ಜ್ ಕ್ಲೂನಿ’ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂದು ಹೆಸರು ಪಡೆದುಕೊಂಡಿದ್ದಾರೆ. ಕ್ಲೂನಿ ಅವರು ಜೂನ್ 1, 2017 ಮತ್ತು ಜೂನ್ 1 2018ರ ಅವಧಿಯಲ್ಲಿ 239 ಮಿಲಿಯನ್ ಅಮೆರಿಕಾ ಡಾಲರ್ ಗಳಷ್ಟು ಹಣವನ್ನು ಗಳಿಸಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.


ಡ್ವೇಯ್ನ್ ಜಾನ್ಸನ್ (124 ಮಿಲಿಯನ್ ಡಾಲರ್) ಅತ್ಯಧಿಕ ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ರಾಬರ್ಟ್ ಡೌನಿ ಜೂನಿಯರ್ (81 ದಶಲಕ್ಷ ಡಾಲರ್) ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಿಸ್ ಹೆಮ್ಸ್ವರ್ತ್ (64.5 ಮಿಲಿಯನ್ ಯುಎಸ್ ಡಾಲರ್) ಇದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸನ್ನಿ ಲಿಯೋನ್ ಕೇರಳ ಪ್ರವಾಹ ನಿಧಿಗೆ 5 ಕೋಟಿ ನೀಡಿಲ್ಲವೆಂದಾದರೆ ಹಾಗಾದ್ರೆ ಕೊಟ್ಟಿದೇನು?