Select Your Language

Notifications

webdunia
webdunia
webdunia
webdunia

ಮಲಗಿದ ತಕ್ಷಣ ನಿದ್ರೆ ಆವರಿಸಬೇಕೇ? ಈ ಟ್ರಿಕ್ ಪಾಲಿಸಿ

ಮಲಗಿದ ತಕ್ಷಣ ನಿದ್ರೆ ಆವರಿಸಬೇಕೇ? ಈ ಟ್ರಿಕ್ ಪಾಲಿಸಿ
Banglore , ಶುಕ್ರವಾರ, 23 ಜೂನ್ 2017 (10:16 IST)
ಬೆಂಗಳೂರು: ಹೆಚ್ಚಿನವರಿಗೆ ನಿದ್ರೆಯದ್ದೇ ಸಮಸ್ಯೆ. ಮಲಗಿದ ತಕ್ಷಣ ನಿದ್ರೆ ಬರಲ್ಲ. ಏನೇನೋ ಯೋಚನೆ ಬಂದು ರಾತ್ರಿಯೆಲ್ಲಾ ನಿದ್ರೆಯಿಲ್ಲದೆ ಹೊರಳಾಡುವವರಿಗೆ ಒಂದು ಟಿಪ್ಸ್.

 
ಮಲಗಿದ ತಕ್ಷಣ ನಿದ್ರೆ ಹೋಗಬೇಕಾದರೆ ಹಲವು ಉಪಾಯಗಳಿವೆ. ಅದಕ್ಕೆ ಕೆಲವೊಂದು ಸಿಂಪಲ್ ಸೂತ್ರ ಅನುಸರಿಸಿದರೆ ಸಾಕು.

ಬಿಸಿ ಪಾನೀಯ
ಮಲಗುವ ಮೊದಲು ಬಿಸಿ ಬಿಸಿಯಾಗಿರುವ ಯಾವುದಾದರೂ ಪಾನೀಯ ಸೇವಿಸಿ. ಬಿಸಿ ಹಾಲು ಅಥವಾ ಚಹಾ ಸೇವನೆಯಿಂದ ನಿಮ್ಮ ದೇಹದ ನರ ಶಾಂತವಾಗುವುದು. ಅದರಲ್ಲೂ ಶುಂಠಿ ಚಹಾ ಸೇವನೆ ನಿದ್ರಾ ಹೀನತೆಗೆ ಪರಿಹಾರ ನೀಡುತ್ತದೆ.

ಓದುವುದು
ಪರೀಕ್ಷೆಗೆ ಪುಸ್ತಕ ಹಿಡಿದು ಓದಲೆ ಕೂತರೆ ತೂಕಡಿಸುವವರು, ಹೀಗೆ ನಿದ್ರೆಯಿಲ್ಲದೇ ಹೊರಳಾಡುವಾಗ ಆಸಕ್ತಿಕರವಲ್ಲದ ಪುಸ್ತಕವೊಂದನ್ನು ಹಿಡಿದು ಓದಲು ಪ್ರಾರಂಭಿಸಿ. ತಾನಾಗಿಯೇ ನಿದ್ರಾ ದೇವಿ ನಿಮ್ಮ ವಶವಾಗುತ್ತಾಳೆ.

ಒಂದೇ ಯೋಚನೆ
ಮಲಗುವ ಮೊದಲು ಹಲವು ಚಿಂತೆಗಳು ಕಾಡುತ್ತಿದ್ದರೆ, ನಿಮ್ಮಷ್ಟಕ್ಕೇ ನೀವು ಸೆಲ್ಫ್ ಕೌನ್ಸೆಲ್ ಮಾಡಿಕೊಳ್ಳಿ. ನಿಮ್ಮಷ್ಟಕ್ಕೆ ಧ್ಯಾನ ಭಂಗಿಯಲ್ಲಿ ಕೂತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಚಿಂತೆಗಳೆಲ್ಲಾ ದೂರ ಹೋಗಲಿ ಎಂದು ಮನದಟ್ಟು ಮಾಡಿಕೊಳ್ಳಿ. ನಿಮ್ಮಷ್ಟಕ್ಕೆ ನೀವೇ ಸಮಸ್ಯೆ ಬಗ್ಗೆ ಮಾತಾಡಿಕೊಳ್ಳುವುದೂ ನೆಮ್ಮದಿ ಪಡೆಯಲು ಸಹಕಾರಿಯಾಗುತ್ತದೆ. ಆಗ ತನ್ನಿಂತಾನೇ ನಿದ್ರೆ ಹತ್ತಿರ ಬರುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಧಿವಾತಕ್ಕೆ ಈ ಆಹಾರ ದಿವ್ಯೌಷಧವಂತೆ..!