Select Your Language

Notifications

webdunia
webdunia
webdunia
webdunia

ಈ ಐದು ಲಕ್ಷಣಗಳಿಂದ ನೀವು ಗರ್ಭಿಣಿಯಾಗಿದ್ದೀರಿ ಎಂದು ಸುಲಭವಾಗಿ ತಿಳಿಯಬಹುದು

ಈ ಐದು ಲಕ್ಷಣಗಳಿಂದ ನೀವು ಗರ್ಭಿಣಿಯಾಗಿದ್ದೀರಿ ಎಂದು ಸುಲಭವಾಗಿ ತಿಳಿಯಬಹುದು
ಬೆಂಗಳೂರು , ಶನಿವಾರ, 30 ಡಿಸೆಂಬರ್ 2017 (06:45 IST)
ಬೆಂಗಳೂರು: ಮದುವೆ ಮುಗಿದ ತಿಂಗಳು ಕಳೆದರೆ ಹುಡುಗಿ ವಾಂತಿ ಮಾಡಿದಾಕ್ಷಣ ಮನೆಯವರು ಆಕೆ ಗರ್ಭಿಣಿ ಎಂದು ಭಾವಿಸುತ್ತಾರೆ. ಯಾಕೆಂದರೆ ವಾಂತಿ ಆಗುವುದು ಗರ್ಭಿಣಿಯಾಗುವುದರ ಲಕ್ಷಣ ಎಂದು ತಿಳಿದಿರುತ್ತಾರೆ. ಆದರೆ ಹೆಣ್ಣು ಮಕ್ಕಳು ಗರ್ಭಿಣಿಯಾದರೆ ವಾಂತಿ  ಮಾಡುವುದೊಂದೆ ಲಕ್ಷಣವಲ್ಲ. ಕೆಲವೊಮ್ಮೆ ಪಿತ್ತದಿಂದಲೂ ವಾಂತಿ ಆಗುತ್ತದೆ. ಕೆಲವು ಹೆಣ್ಣುಮಕ್ಕಳು ತಾನು ಗರ್ಭಿಣಿ ಎನ್ನುವ ವಿಷಯವನ್ನು ಅವರಲ್ಲಾಗುವ ಬದಲಾವಣೆಯಿಂದ  ತಿಳಿಯಲು ಅಸಮರ್ಥರಾಗಿರುತ್ತಾರೆ. ಗರ್ಭಿಣಿಯಾಗಿದ್ದೆನೆ ಎಂದು ತಿಳಿಯಲು ಈ ಐದು ಲಕ್ಷಣಗಳನ್ನು ಖಚಿತಪಡಿಸಿಕೊಳ್ಳಿ.

 
ಮೊದಲನೇಯದಾಗಿ ಗರ್ಭಧರಿಸಿದಾಗ ಕಿಡ್ನಿಯ ಕಾರ್ಯ ಅಧಿಕವಾಗುತ್ತದೆ. ಭ್ರೂಣವು ಕಿಡ್ನಿಯ ಮೇಲೆ ಒತ್ತಡ ಹಾಕುವುದರಿಂದ ಪದೇ ಪದೇ ಮೂತ್ರ ವಿಸರ್ಜನೆ ಯಾಗುತ್ತಿರುತ್ತದೆ. ಎರಡನೇಯದಾಗಿ ಗರ್ಭಧರಿಸಿದ ಮೊದಲನೇಯ ತಿಂಗಳು ಸ್ತನದ ತುದಿ ಕಪ್ಪಾಗುತ್ತದೆ. ಮೂರನೇಯದಾಗಿ ಗರ್ಭಧರಿಸಿದಾಗ ಮೊದಲು ಕಾಣಿಸೊದು ಸುಸ್ತು. ಮುಂಜಾನೆ ಎದ್ದಾಗ ತುಂಬಾ ಸುಸ್ತಾದಂತೆ ಕಾಣುತ್ತದೆ. ತಲೆ ಸುತ್ತುತ್ತದೆ, ವಾಂತಿಯಾಗುತ್ತದೆ. ಇದೆಲ್ಲಾ ಗರ್ಭಿಣಿಯಾಗುವುದರ ಲಕ್ಷಣ.

 
ನಾಲ್ಕನೇಯದಾಗಿ ಗರ್ಭಧರಿಸಿದ ಮೊದಲ ತಿಂಗಳಲ್ಲಿ ಕೆಲವರಿಗೆ ಸ್ವಲ್ಪ ರಕ್ತ ಸ್ರಾವವಾಗುತ್ತದೆ. ಆದರೆ ರಕ್ತ ತೆಳುವಾದ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಐದನೇಯದಾಗಿ ಏನಾದರೂ ತಿನ್ನಬೇಕು ಎಂಬ ಬಯಕೆ ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲೂ ಹೆಚ್ಚಿನವರು ಹುಳಿ ತಿನ್ನಲು ಇಷ್ಟಪಡುತ್ತಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಲಭವಾಗಿ ರೆಡಿಯಾಗುವ ಆಲೂಗಡ್ಡೆ ಫ್ರೈ