ತಂದೆ-ತಾಯಿ ಬಂದರೆ ಪತ್ನಿಯೊಡನೆ ರೊಮ್ಯಾನ್ಸ್ ಮಾಡದ ಗಂಡನಿಗೆ ಏನು ಮಾಡೋದು?

ಶುಕ್ರವಾರ, 15 ಮಾರ್ಚ್ 2019 (10:53 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಅತ್ತೆ ಮಾವ ಹಳ್ಳಿಯಲ್ಲಿ, ಮಗ-ಸೊಸೆ ಪ್ಯಾಟೆಯಲ್ಲಿ ಎನ್ನುವ ಕುಟುಂಬಗಳೇ ಹೆಚ್ಚು. ಆದರೆ ಆಗೊಮ್ಮೆ, ಈಗೊಮ್ಮೆ ಮನೆಗೆ ಬರುವ ಅತ್ತೆ-ಮಾವನಿಂದಾಗಿ ಗಂಡನ ವರ್ತನೆಯೇ ಬದಲಾಗುತ್ತದೆ ಎಂಬುದು ಪತ್ನಿಯರ ಅಳಲು.


ಅತ್ತೆ-ಮಾವ ಬಂದರೆ ಗಂಡ ಹೆಚ್ಚು ಗಂಭೀರವಾಗಿರುತ್ತಾನೆ. ತನ್ನ ಜತೆ ಯಾವತ್ತಿನ ಹಾಗೆ ಪ್ರೀತಿಯಿಂದ ಮಾತನಾಡಲ್ಲ. ಮಂಚಕ್ಕಂತೂ ಬರುವುದೇ ಇಲ್ಲ ಎಂಬುದು ಕೆಲವು ಪತ್ನಿಯರ ಅಳಲು.

ಇದಕ್ಕೆ ಕಾರಣ, ಆತನಿಗೆ ಪೋಷಕರ ಎದುರು ಪತ್ನಿಯೊಡನೆ ರೊಮ್ಯಾಂಟಿಕ್ ಆಗಿ ವರ್ತಿಸಲು ಸಂಕೋಚವಿರಬಹುದು. ಅದಕ್ಕೇ ಆತ ಗಾಂಭೀರ್ಯದ ಮುಖವಾಡ ಹಾಕಿರಬಹುದು. ಇನ್ನು, ಪತ್ನಿ ಜತೆ ಸಲುಗೆಯಿಂದಿದ್ದರೆ ಎಲ್ಲಿ ತಮ್ಮ ಪೋಷಕರು ಅವರನ್ನು ಕಡೆಗಣಿಸುತ್ತಾರೆ ಎಂದು ತಿಳಿದುಕೊಂಡರೆ ಎಂಬ ಭಯವೂ ಕಾರಣವಿರಬಹುದು.

ಹೀಗಾಗಿ ಇಂತಹ ಸಂದರ್ಭದಲ್ಲಿ ಪತ್ನಿಯಾದವಳು ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸುವುದೇ ಜಾಣತನ. ಮೊದಲು ಆತನಲ್ಲಿ ಮಾತನಾಡಿ, ಆ ರೀತಿ ವರ್ತಿಸುವುದರಿಂದ ತನ್ನ ಮನಸ್ಸಿಗೆ ಹೇಗೆ ಘಾಸಿಯಾಗುತ್ತದೆ ಎಂಬುದನ್ನು ತಿಳಿ ಹೇಳಬೇಕು. ಬಹುಶಃ ಗಂಡಂದಿರಿಗೂ ಪೋಷಕರು ಮತ್ತು ಪತ್ನಿಯ ನಡುವೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾಗಬಹುದು. ಹೀಗಾಗಿ ಕೆಲವು ಸಮಯ ಪತ್ನಿಯಾದವಳು ಪತಿಯ ಮನಸ್ಸು ಅರಿತು ನಡೆದುಕೊಳ್ಳಲೇಬೇಕಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಸಂಗಾತಿ ನೀಡುವ ರತಿ ಸುಖ ಸಾಕಾಗುತ್ತಿಲ್ಲ, ಏನು ಮಾಡಲಿ?