Select Your Language

Notifications

webdunia
webdunia
webdunia
webdunia

ಡಯಟ್ ಮಾಡುವವರು ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು?

ಡಯಟ್ ಮಾಡುವವರು ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು?
Bangalore , ಶುಕ್ರವಾರ, 5 ಮೇ 2017 (16:45 IST)
ಬೆಂಗಳೂರು: ಡಯಟ್ ಮಾಡುವವರು ಕೊಬ್ಬಿನ ಅಂಶದ ಆಹಾರ ಮುಟ್ಟುವುದಿಲ್ಲ ಎಂದು ದಿನಕ್ಕೆ ಹೊಟ್ಟೆ ತುಂಬುವಷ್ಟು ಮೊಟ್ಟೆ  ಸೇವಿಸುತ್ತಾರೆ. ಆದರೆ ಇದು ತಪ್ಪು ಎನ್ನುತ್ತಾರೆ ತಜ್ಞರು.

 
ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದರ ಬಗ್ಗೆ ನಮ್ಮಲ್ಲೇ ತಪ್ಪು ಕಲ್ಪನೆಯಿದೆ. ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದೇನೋ ನಿಜ. ಹಾಗಂತ ಮಿತಿ ಮೀರಿ ತಿಂದರೆ ಅದೂ ಒಳ್ಳೆಯದಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ದಿನಕ್ಕೆ 5 ರಿಂದ 6 ಮೊಟ್ಟೆ ತಿನ್ನುವವರು ಗಮನಿಸಬೇಕು. ಡಯಟ್ ಮಾಡುವಾಗ ಒಂದು ದಿನಕ್ಕೆ 1 ಅಥವಾ ಹೆಚ್ಚೆಂದರೆ ಎರಡು ಮೊಟ್ಟೆ ತಿನ್ನಬಹುದು. ಮೊಟ್ಟೆ ಉಷ್ಣಾಹಾರವಾಗಿರುವುದರಿಂದ ಅತಿಯಾಗಿ ತಿನ್ನುವುದು ದೇಹಕ್ಕೆ ಒಳ್ಳೆಯದಲ್ಲ.

ಹೆಚ್ಚು ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗಬಹುದು. ಮೊಟ್ಟೆಯಲ್ಲಿ ಪೋಷಕಾಂಶಗಳು ಸಾಕಷ್ಟಿವೆ. ಹೀಗಾಗಿ ಹೆಚ್ಚಿನ ಕ್ಯಾಲೋರಿ ನಾಶಗೊಳಿಸಲು ಬಯಸುವವರಿಗೆ ಇದು ಉತ್ತಮ ಆಹಾರ. ಆದರೆ ತೂಕ ಹೆಚ್ಚುವಿಕೆ ಮತ್ತು ಮೊಟ್ಟೆಗೆ ಪರಸ್ಪರ ಸಂಬಂಧವಿರುವುದರಿಂದ ನೋಡಿಕೊಂಡು ಸೇವಿಸುವುದು ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸೌತೇಕಾಯಿ ಕಹಿಯಾಗುತ್ತಿದೆಯೇ? ಕಹಿ ತೆಗೆಯಲು ಇಲ್ಲಿದೆ ಸಿಂಪಲ್ ಉಪಾಯ