Select Your Language

Notifications

webdunia
webdunia
webdunia
webdunia

ಮಹಿಳೆಯರ ಮಾನಸಿಕ ದೈಹಿಕ ತೊಂದರೆಗೆ ಇಲ್ಲಿದೆ ಪರಿಹಾರ

ಮಹಿಳೆಯರ ಮಾನಸಿಕ ದೈಹಿಕ ತೊಂದರೆಗೆ ಇಲ್ಲಿದೆ ಪರಿಹಾರ
ಬೆಂಗಳೂರು , ಶುಕ್ರವಾರ, 18 ಮೇ 2018 (17:03 IST)
ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಹಾರ್ಮೋನ್ ಗಳ ಏರುಪೇರಿನಿಂದಾಗಿ ಹಲವು ರೀತಿಯ ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಹಾರ್ಮೋನ್ ಗಳ ಏರುಪೇರಿಗೆ ಮುಖ್ಯ ಕಾರಣ ಅವರು ಸೇವಿಸುವ ಆಹಾರಗಳು. ಇಂತಹ ಆಹಾರಗಳನ್ನು ಮಹಿಳೆಯರು ಸೇವಿಸದಿರುವುದೇ ಉತ್ತಮ.
ಸ್ತ್ರೀಯರ ಹಾರ್ಮೋನ್ ಗಳನ್ನು ಏರುಪೇರಾಗಿಸುವ ಆಹಾರಗಳು ಇಲ್ಲಿದೆ ನೋಡಿ
 
*ನಾವು ದಿನ ನಿತ್ಯ ಸೇವಿಸುವ ಆಹಾರಗಳಲ್ಲಿ ಸಕ್ಕರೆ ಮತ್ತು ಸಕ್ಕರೆಯ ಅಂಶವಿರುವ ಆಹಾರಗಳನ್ನು ಅತಿ ಹೆಚ್ಚು ತಿನ್ನುವುದ್ರಿಂದ ಹಾರ್ಮೋನ್ ಏರುಪೇರಾಗಬಹುದು. ಸಕ್ಕರೆ ನಮ್ಮ ನರವ್ಯೂಹವನ್ನು ಶೇ. 50 ರಷ್ಟು ದುರ್ಬಲಗೊಳಿಸುವ ಶಕ್ತಿ ಹೊಂದಿದೆ. ಹೀಗಾಗಿ ಸಕ್ಕರೆಯ ಬದಲು, ನೈಸರ್ಗಿಕವಾಗಿ ಸಿಹಿ ಹೊಂದಿರುವ ಜೇನು ತುಪ್ಪವನ್ನು ತಿನ್ನುವುದು ಒಳ್ಳೆಯದು.
 
 
*ಚಹಾದ ಎಲೆಗಳನ್ನು ಹೊಂದಿರುವಂಥ { coffeine } ಅಂಶ ನಮ್ಮ ದೇಹದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಅಂಶ ನಮ್ಮ ಮೂಡ್ ಹಾಳು ಮಾಡಬಹುದು ಮತ್ತು ನರ ವ್ಯೂಹಕ್ಕೆ ತೊಂದರೆಯುಂಟು ಮಾಡಬಹುದು. ಹೀಗಾಗಿ ಅದರಲ್ಲೂ ವಿಶೇಷವಾಗಿ ಮುಟ್ಟು ನಿಂತ ಮಹಿಳೆಯರು ಈ ಅಂಶವಿರುವ ಆಹಾರವನ್ನು ಸೇವಿಸಲೇಬಾರದು.
 
*ಆಧುನಿಕ ಜಗತ್ತಿನಲ್ಲಿ ಮಹಿಳೆಯರೂ ಮದ್ಯವಸನಿಗಳಾಗುತ್ತಿದ್ದಾರೆ. ಮದ್ಯಪಾನ ನಮ್ಮ ದೇಹದ ಅಂಗಾಂಗಳಿಗೆ ಹೆಚ್ಚು ಕೆಲಸ ನೀಡುತ್ತದೆ.ಆದ್ದರಿಂದ ಇವುಗಳನ್ನು ಬಿಡುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಗ ತೂಕ ಇಳಿಯಬೇಕಾ? ಹಾಗಿದ್ರೆ ಇಲ್ಲಿದೆ ಹೊಸ ಐಡಿಯಾ