Select Your Language

Notifications

webdunia
webdunia
webdunia
webdunia

ಮನೆ ಅಂದವಾಗಿಟ್ಟುಕೊಳ್ಳಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್

ಮನೆ ಅಂದವಾಗಿಟ್ಟುಕೊಳ್ಳಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್
ಬೆಂಗಳೂರು , ಸೋಮವಾರ, 25 ಡಿಸೆಂಬರ್ 2017 (09:03 IST)
ಬೆಂಗಳೂರು: ಮನೆಯ ಗೋಡೆ, ನೆಲ, ಇನ್ನತರ ವಸ್ತುಗಳು ಎಲ್ಲಾ ಮೊದಲಿಗೆ ಚೆನ್ನಾಗಿ, ಹೊಳೆಯುತ್ತಿರುತ್ತದೆ. ಆಮೇಲೆ ಬಳಸಿದಾಗ ಹಾಗೆ ಮಾಸಿ ಹೋಗುತ್ತದೆ. ಎಷ್ಟು ಸ್ವಚ್ಚ ಮಾಡಿದರು  ಅದು ಮಸುಕಾಗಿಯೇ ಇರುತ್ತದೆ. ಇದಕ್ಕೆ ಪರಿಹಾರ ಇಲ್ಲಿದೆ.


  1. ಮಿಕ್ಸರ್ ಜಾರ್ ನ ಬ್ಲೇಡ್ ನಲ್ಲಿ ಏನಾದರು ಸಿಕ್ಕಿಕೊಂಡಿದ್ದು ಅದನ್ನು ತೆಗೆಯಲು ಆಗದಿದ್ದಾಗ ಆ ಜಾರಿಗೆ ನೀರು ಮತ್ತು ಸ್ವಲ್ಪ ಸೋಪಿನ ತುಂಡನ್ನು ಹಾಕಿ ರುಬ್ಬಿ. ಇದರಿಂದ ಬ್ಲೇಡ್ ನಲ್ಲಿ ಸಿಕ್ಕಿಕೊಂಡಿದ್ದು ಹೋಗುತ್ತದೆ.
  2. ಮನೆ ನೆಲ, ಗೋಡೆ, ಟೈಲ್ಸ್ ಮೇಲೆ ಕಲೆಯಾಗಿದ್ದರೆ ಒಂದು ಬಕೆಟ್ ನೀರಿಗೆ 5 ರಿಂದ 6 ಚಮಚ ವಿನೆಗರ್ ಮಿಶ್ರಣ ಮಾಡಿ ಬಟ್ಟೆಯಿಂದ ಕಲೆಯಿದ್ದಲ್ಲಿ ಒರೆಸಿದರೆ ಕಲೆ ಹೋಗುತ್ತದೆ.
  3. ಸ್ನಾನದ ಕೋಣೆಯ ಕಲೆ ತೆಗೆಯಲು ಪಾತ್ರೆ ತೊಳೆಯುವ ಸೋಪಿನ ಜೊತೆ 6 ಚಮಚ ವಿನೆಗರ್ ಮಿಶ್ರಣ ಮಾಡಿ ಬ್ರೆಷ್ ನಿಂದ ಉಜ್ಜಿ ತೊಳೆದರೆ ಕಲೆ ನಿವಾರಣೆಯಾಗುತ್ತದೆ.
  4. ಅಡುಗೆ ಮನೆ ಸಿಂಕ್ ನಲ್ಲಿರುವ ಕಲೆ ತೆಗೆಯಲು ಸೋಡಾ 1 ಚಮಚ, ಸ್ವಲ್ಪ ಪುಡಿ ಉಪ್ಪು, ಮತ್ತು ಒಂದು ನಿಂಬೆಹಣ್ಣಿನ ರಸ ಎಲ್ಲವನ್ನು ಸೇರಿಸಿ ಮಿಶ್ರಣ ಮಾಡಿ ಸಿಂಕ್ ಗೆ ಹಚ್ಚಿ ಬ್ರೆಶ್ ನಿಂದ ಉಜ್ಜಿ ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ ಹೊಸದರಂತಿರುತ್ತದೆ.
  5. ದೋಸೆ ತವಾ ಕಪ್ಪಾಗಿದ್ದರೆ ತವವನ್ನು ಬಿಸಿಗೆ ಇಟ್ಟು ಅದಕ್ಕೆ ಸ್ವಲ್ಪ ನೀರು, ಸ್ವಲ್ಪ ಪಾತ್ರೆ ತೊಳೆಯುವ ಸೋಪು, ಹುಣಸೆಹಣ್ಣು, ಸೋಡಾವನ್ನು ಹಾಕಿ ಬಿಸಿ ಮಾಡಿ. ನೀರು ಕುದಿಯುವಾಗ  ಗ್ಯಾಸ್ ಆಫ್ ಮಾಡಿ. ತವವನ್ನು ಪಾತ್ರೆ ತೊಳೆಯುವ ಸೋಪಿನಿಂದ ತೊಳೆಯಿರಿ.ಆಗ ತವದಲ್ಲಿರುವ ಕಪ್ಪು ಕಲೆ ಹೋಗುತ್ತದೆ.
  6. ಅಡುಗೆ ಪಾತ್ರೆ ತಳ ಹಿಡಿದು ಸೀದೊಗಿದ್ದರೆ ಆ ಪಾತ್ರೆಗೆ ಸ್ವಲ್ಪ ನೀರು ಮತ್ತು ಹುಣಸೆಹಣ್ಣು ಹಾಕಿ ಕುದಿಸಿ. ನಂತರ ಬ್ರೆಶ್ ನಿಂದ ಉಜ್ಜಿ ತೊಳೆಯಿರಿ. ತಳ ಹಿಡಿದದ್ದು ಹೋಗುತ್ತದೆ.
  7. ಫ್ರಿಜ್ ನಲ್ಲಿ ಬರುವ ದುರ್ವಾಸನೆ ತಡೆಯಲು 1 ಲೀಟರ್ ನೀರಿಗೆ, 1 ನಿಂಬೆ ಹಣ್ಣಿನ ರಸವನ್ನು ಹಾಕಿ ಮುಚ್ಚಳ  ಮುಚ್ಚದೆ ಫ್ರಿಜ್ ನಲ್ಲಿಟ್ಟರೆ ವಾಸನೆ ಹೋಗುತ್ತದೆ.
  8. ಗಾಜಿನ ಪಾತ್ರೆ ಕಳೆಗುಂದಿದ್ದರೆ ವಿನೆಗರ್ ಸ್ಪ್ರೇ ಮಾಡಿ ಬಟ್ಟೆಯಿಂದ ಒರೆಸಿದರೆ ಗಾಜಿನ ಪಾತ್ರೆಗೆ ಹೊಳಪು ಬರುತ್ತದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜನನಾಂಗದ ಬಳಿ ಇರುವ ಕೂದಲು ತೆಗೆದರೆ ಏನೆಲ್ಲಾ ರೋಗ ಬರುತ್ತೆ ಗೊತ್ತಾ…?