Select Your Language

Notifications

webdunia
webdunia
webdunia
webdunia

ಗುಪ್ತಾಂಗದಲ್ಲಿ ಕಾಡುವ ಮೊಡವೆಗೆ ಇಲ್ಲಿದೆ ನೋಡಿ ಮದ್ದು

ಗುಪ್ತಾಂಗದಲ್ಲಿ  ಕಾಡುವ ಮೊಡವೆಗೆ ಇಲ್ಲಿದೆ ನೋಡಿ ಮದ್ದು
ಬೆಂಗಳೂರು , ಶನಿವಾರ, 28 ಜುಲೈ 2018 (15:19 IST)
ಬೆಂಗಳೂರು: ಮೊಡವೇ ಕೇವಲ ಮುಖ, ಎದೆ, ಬೆನ್ನಿನಲ್ಲಿ ಮಾತ್ರ ಮೂಡುವುದಲ್ಲದೇ, ಗುಪ್ತಾಂಗದಲ್ಲೂ ಕಂಡು ಬರುತ್ತದೆ. ಯೋನಿಯ ಹೊರಭಾಗವು ಕಲ್ಮಷ ಹಾಗೂ ಬ್ಯಾಕ್ಟೀರಿಯಾದಿಂದ ತುಂಬಿದಾಗ ಮೊಡವೆಗಳು ಎಳುತ್ತವೆ. ಇಂತಹ ಭಾಗದಲ್ಲಿ ಮೊಡವೆ ಮೂಡಿದರೆ ಅದನ್ನು ವೈದ್ಯರಿಗೆ ತೋರಿಸುವುದು ಕೂಡ ಮುಜುರಕ್ಕೀಡು ಮಾಡುತ್ತದೆ.


ಹಾರ್ಮೋನು ಅಸಮತೋಲನ ಮುಖ ಹಾಗೂ ಗುಪ್ತಾಂಗದ ಭಾಗದಲ್ಲಿನ ಚರ್ಮವು ಹಾರ್ಮೋನು ಅಸಮತೋಲನಕ್ಕೆ ಒಳಗಾಗಿ, ಅತಿಯಾದ ಬ್ಯಾಕ್ಟೀರಿಯಾದಿಂದ ಮೊಡವೆಗಳು ಮೂಡಬಹುದು. ಇದನ್ನು ಯೋನಿ ಮೊಡವೆಯೆಂದು ಕರೆಯಲಾಗುತ್ತದೆ. ಇದರಲ್ಲಿ ಹೆಚ್ಚು ನೀರಿನಾಂಶ ಅಥವಾ ಕೀವು ಇರುತ್ತದೆ.


ಗುಪ್ತಾಂಗದ ಕೂದಲನ್ನು ಬೆಳೆಯಲು ಬಿಡಿ
ಗುಪ್ತಾಂಗದ ಕೂದಲನ್ನು ಕೆಲವರು ವ್ಯಾಕ್ಸಿಂಗ್ ಅಥವಾ ಶೇವಿಂಗ್ ನಿಂದ  ತೆಗೆಯುತ್ತಾರೆ. ಇದರಿಂದಾಗಿ ಕೂದಲಿನ ಕೋಶಗಳು ಉರಿಯೂತಕ್ಕೆ ಒಳಗಾಗುವುದು. ಇದರಿಂದ ಮೊಡವೆಗಳು ಆಗುತ್ತದೆ. ಇದರಿಂದ ಒಳಗಡೆ ಇರುವಂತಹ ಕೂದಲು ಬೆಳೆಯಲು ಬಿಡಿ ಅಥವಾ ಎಚ್ಚರಿಕೆಯಿಂದ ತೆಗೆದು ಸೋಂಕು ಉಂಟಾಗದಂತೆ ನೋಡಿ


ಸಡಿಲವಾದ ಒಳಡುಪು ಧರಿಸಿ
ಬಿಗಿಯಾದ ಒಳ ಉಡುಪು ಬೇಡವೇ ಬೇಡ. ಸಡಿಲವಾದ ೊಳುಡುಪು ಧರಿಸುವುದರಿಂದ ಆ ಭಾಗದ ಚರ್ಮವು ಸರಿಯಾಗಿ ಉಸಿರಾಡಲು ಸಾಧ್ಯವಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾವು ನಾಶವಾಗುತ್ತದೆ.


ಸ್ವಚ್ಚತೆಗೆ ಆದ್ಯತೆ ನೀಡಿ
ಆ ಭಾಗವನ್ನು ತುಂಬಾ ಗಡುಸಾದ ನೀರು, ಸೋಪಿನಿಂದ ತೊಳೆದುಕೊಳ್ಳಬೇಡಿ. ಮೈಲ್ಡ್ ಸೋಪಿನಿಂದ ತೊಳೆದುಕೊಳ್ಳಿ. ಆದಷ್ಟು ಕ್ಲೀನ್ ಆಗಿರುವುದಕ್ಕೆ ನೋಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅತಿಯಾದ ಲೈಂಗಿಕ ಕ್ರಿಯೆಯೂ ಅಪಾಯಕಾರಿಯೇ?