Select Your Language

Notifications

webdunia
webdunia
webdunia
webdunia

ಹೃದಯಬೇನೆ ಅಪಾಯದಿಂದ ಮುಕ್ತರಾಗಲು ಹಣ್ಣು , ತರಕಾರಿ ತಿನ್ನಬೇಕು

ಹೃದಯಬೇನೆ  ಅಪಾಯದಿಂದ ಮುಕ್ತರಾಗಲು ಹಣ್ಣು , ತರಕಾರಿ ತಿನ್ನಬೇಕು
bangalore , ಮಂಗಳವಾರ, 31 ಅಕ್ಟೋಬರ್ 2023 (14:26 IST)
ಹೃದಯಬೇನೆಗಳು ಕಾಣಿಸಿಕೊಳ್ಳುವ ಅಪಾಯದಿಂದ ಮುಕ್ತರಾಗಲು ಮಹಿಳೆಯರು ಹೆಚ್ಚೆಚ್ಚು ಹಣ್ಣು , ತರಕಾರಿಗಳನ್ನು ತಿನ್ನಬೇಕು ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ.

ಹಣ್ಣು, ತರಕಾರಿಯಂಥ ಆಹಾರ ಕಡಿಮೆ ಸೇವಿಸುವ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚೆಚ್ಚು ಹಣ್ಣು, ತರಕಾರಿ ತಿನ್ನುವ ಮಹಿಳೆಯರಲ್ಲಿ 20 ವರ್ಷಗಳ ನಂತರ ಹೃದಯದ ರಕ್ತನಾಳಗಳಲ್ಲಿ ಲೋಳೆಯಂತಹ ನಿಕ್ಷೇಪದ ಶೇಖರಣೆ ಕಡಿಮೆಯಾಗುತ್ತದೆ. ಲೋಳೆಯಂಥ ನಿಕ್ಷೇಪ ಅಥವಾ ಕೊಬ್ಬಿನ ಶೇಖರಣೆಯಿಂದ ಹೃದಯಬೇನೆ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ಅಪಾಯ ಹೆಚ್ಚಿರುತ್ತದೆ.
 
ಆಶ್ಚರ್ಯಕರವೆಂದರೆ, ಸಂಶೋಧನೆಯ ಫಲಿತಾಂಶಗಳಲ್ಲಿ ಪುರುಷರಿಗೆ ಇದು ಅನ್ವಯವಾಗುವುದಿಲ್ಲ ಎಂದು ತೋರಿಸಿದೆ. ಲೋಳೆಯ ಶೇಖರಣೆ ಜೀವಾವಧಿ ಪ್ರಕ್ರಿಯೆಯಾಗಿದ್ದು, ಯೌವನದಲ್ಲಿ ಆರೋಗ್ಯಕರ ಆಹಾರ ಸೇವನೆಯಿಂದ ಈ ಪ್ರಕ್ರಿಯೆ ತಗ್ಗುತ್ತದೆ ಎಂದು ಅಮೆರಿಕದ ಮಿನಿಯಾಪೊಲೀಸ್ ಹೃದಯರೋಗ ತಜ್ಞ ಮೈಕೇಲ್ ಡಿ. ಮೈಡೇಮಾ ಹೇಳಿದ್ದಾರೆ.
 
2508 ಜನರನ್ನು ಒಳಗೊಂಡ ಅಧ್ಯಯನದಲ್ಲಿ ಸಂಶೋಧಕರು ಯುವಜನರಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಮತ್ತು 20 ವರ್ಷಗಳ ನಂತರ ಹೃದಯ ಬೇನೆಯ ಉಪಸ್ಥಿತಿ ಕುರಿತ ಸಂಬಂಧವನ್ನು ಮೌಲ್ಯಮಾಪನ ಮಾಡಲಾಯಿತು.

ಸಿಟಿ ಸ್ಕ್ರಾನ್‌ಗಳನ್ನು ಬಳಸಿಕೊಂಡುಪಡೆದುಕೊಂಡ ಸಿಎಸಿ ಅಂಕಗಳು ಹೃದಯರಕ್ತನಾಳಗಳಲ್ಲಿ ಶೇಖರವಾದ ಕೊಬ್ಬಿನ ಮೊತ್ತದ ನೇರ ಅಂದಾಜನ್ನು ಒದಗಿಸಿದೆ. 20ರ ಆಸುಪಾಸಿನಲ್ಲಿ 8ರಿಂದ 9 ಸರ್ವಿಂಗ್‌ಗಳ ಹಣ್ಣು , ತರಕಾರಿ ಸೇವಿಸುವ ಮಹಿಳೆಯರು 40ರ ಆಸುಪಾಸಿನಲ್ಲಿ ರಕ್ತನಾಳಗಳಲ್ಲಿ ಲೋಳೆ ಅಥವಾ ಕೊಬ್ಬಿನ ಶೇಖರಣೆಯ ಪ್ರಮಾಣ ಕಡಿಮೆಯಾಗಿರುವುದನ್ನು ಅಧ್ಯಯನ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀಬೇಕಾಯಿ ಆರೋಗ್ಯಕ್ಕೆ ಎಷ್ಟು ಉಪಯುಕ್ತ ಎಂದು ಗೊತ್ತಾ?